ನಿನ್ನೆಯಷ್ಟೇ ತೆರೆಕಂಡಿದ್ದ ‘ಕಲ್ಕಿ 2898 ಎಡಿ’ ಚಿತ್ರ ಪ್ರಪಂಚದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಮೂಲಗಳ ಪ್ರಕಾರ, ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಮೊದಲ ದಿನವೇ 180 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಪೈಕಿ ಭಾರತದಲ್ಲೇ 65 ಕೋಟಿ ಸಂಗ್ರಹ ಮಾಡಿದ್ದು, ಇದರಲ್ಲಿ 64.50 ಕೋಟಿ ರೂ. ತೆಲುಗು ಅವತರಣಿಕೆಯಿಂದಲೇ ಬಂದಿದೆ. ಇದರೊಂದಿಗೆ ಜವಾನ್, ಕೆಜಿಎಫ್ 2 ಸೇರಿದಂತೆ ಹಲವು ಚಿತ್ರಗಳ ಐತಿಹಾಸಿಕ ದಾಖಲೆಗಳನ್ನು ಈ ಚಿತ್ರ ಮುರಿದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನು ಈ ಚಿತ್ರಕ್ಕೆ 600 ಕೋಟಿ ರೂ. ಬಂಡವಾಳ ಹೂಡಿದ್ದು, ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ.