ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹೊಸ ನೇಮಕಾತಿ ಆರಂಭವಾಗಿದೆ. ಜನರಲ್ ಮ್ಯಾನೇಜರ್, ಸಿಗ್ನಲ್ ಮ್ಯಾನೇಜರ್ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆ.25 ಕೊನೆ ದಿನ. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 2,06,250/- ರೂ. ಸಂಬಳ ಗಳಿಸಿದ್ದಾರೆ.
ಜನರಲ್ ಮ್ಯಾನೇಜರ್( ಕಾಂಟ್ರಾಕ್ಟ್/ ಸ್ಟೋರ್) ಜನರಲ್ ಮ್ಯಾನೇಜರ್ (ಟ್ರಾಕ್ಷನ್), ಜನರಲ್ ಮ್ಯಾನೇಜರ್(ಪಿ ವೇ) ಹಾಗೂ ಜನರಲ್ ಮ್ಯಾನೇಜರ್ (ಸಿಗ್ನಲಿಂಗ್) ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಕಾಂಟ್ರಾಕ್ಟ್ ಹುದ್ದೆಗೆ 58 ಹಾಗೂ ಡೆಪ್ಯೂಟೇಶನ್ ಹುದ್ದೆಗೆ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್, ಮೆಕಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನೀಯರಿಂಗ್ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಆರಂಭಿಕ ಮೂರು ವರ್ಷ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕಿದ್ದು, ಬಳಿಕ ಪರ್ಫಾಮೆನ್ಸ್ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆಯಲಾಗುತ್ತದೆ. ವಿದ್ಯಾರ್ಹತೆ ಜತೆಗೆ ಕನ್ನಡ ಭಾಷೆಗೂ ಆದ್ಯತೆ ನೀಡಲಾಗಿದೆ. ಸೂಕ್ತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ಮೆಟ್ರೋದ ಅಧಿಕೃತ ವೆಬ್ಸೈಟ್ ನೋಡಿ.