ಬೆಂಗಳೂರು: ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿರುವ ಕುರಿತು ಜಾತ್ಯಾತೀತ ಜನತಾ ದಳವು ಟ್ವೀಟ್ ಮಾಡಿದ್ದು, ಇದು ಗ್ಯಾರಂಟಿ ಗವರ್ಮೆಂಟಿನ ಕಾಣಿಕೆ ಎಂದು ಕುಟುಕಿದೆ.
ತುರ್ತು ಪರಿಸ್ಥಿತಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಬಂಪರ್ ಕೊಡುಗೆ ಕೊಟ್ಟಿದೆ! ಎಂದು ಕಿಚಾಯಿಸಿರುವ ಜೆಡಿಎಸ್, ಈ ದರ ಏರಿಕೆ ಲಾಭ ಹಾಲು ಉತ್ಪಾದಕರಿಗೆ ಸಿಗಲಿದೆಯೋ ಅಥವಾ ಕೆಎಂಎಫ್ ಜೋಳಿಗೆಗೆ ಹೋಗಲಿದೆಯೋ? ಗೊತ್ತಿಲ್ಲ. ಆದರೆ ಈ ಬೆಲೆ ಏರಿಕೆಗೆ ಗ್ಯಾರಂಟಿಯೇ ಮೂಲ! ಎಂದು ಉದ್ಗರಿಸಿದೆ.
ಪ್ರತೀ ಲೀಟರ್ ಹಾಲಿನ ಪೊಟ್ಟಣಕ್ಕೆ 50ml ಹೆಚ್ಚುವರಿ ಹಾಲನ್ನು ಸೇರಿಸಿರುವ ಕೆಎಂಎಫ್, ಬೆಲೆಯನ್ನು ಎರಡು ರೂ. ಹೆಚ್ಚಳ ಮಾಡಿ ಆದೇಶಿಸಿದೆ. ಇದು ವಿಪಕ್ಷಗಳು ಸರ್ಕಾರವನ್ನು ಕಾಲೆಳೆಯಲು ಕಾರಣವಾಗಿದೆ.