Prajwal revanna: ಪ್ರಜ್ವಲ್ ರೇವಣ್ಣನ ಮತ್ತೊಂದು ಕರ್ಮಕಾಂಡ ಬಯಲು

ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಯುವ ನಾಯಕ, ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಸಂತ್ರಸ್ತೆಯೊಬ್ಬರು ದೂರಿನಲ್ಲಿ ಉಲ್ಲೇಖಿಸಿರುವಂತೆ ಆರೋಪಿ ಪ್ರಜ್ವಲ್ ಬಳಿ ೧೫ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳಿದ್ದವು. ಒಂದು ನಂಬರ್ ಬ್ಲಾಕ್ ಮಾಡಿದರೆ ಮತ್ತೊಂದರಿಂದ ಕಾಲ್ ಮಾಡುತ್ತಿದ್ದ. ಅಲ್ಲದೆ ವಿಡಿಯೋ ಕಾಲ್ ಮಾಡಿ ಸಂಪೂರ್ಣ ಬೆತ್ತಲಾಗುವಂತೆ ಕೋರುತ್ತಿದ್ದ. ನಿರಾಕರಿಸಿದರೆ ತನ್ನ ಬಳಿ ಈಗಾಗಲೇ ಇರುವ ಬೆತ್ತಲೆ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಮದುವೆಯಾದ ಹೆಂಗಸರೇ ಅವನ ಟಾರ್ಗೆಟ್ ಆಗಿರುತ್ತಿದ್ದರು ಎಂದಿದ್ದಾರೆ.

ಸಿಐಡಿ ವಶದಲ್ಲಿರುವ ಪ್ರಜ್ವಲ್ ಈಗಾಗಲೇ ಹಲವು ಪರೀಕ್ಷೆಗಳನ್ನು ಎದುರಿಸಿದ್ದು, ವಿಚಾರಣೆಗೂ ಒಳಪಡುತ್ತಿದ್ದಾರೆ.

Leave a Reply

Your email address will not be published. Required fields are marked *