ಬೆಂಗಳೂರು : ಹಾಸನದ ಸಂಸದ ಪ್ರಜ್ವಲ್ ರೇವಣ್ಣದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಗಳನ್ನು ಯಾರು ಹಂಚಿದ್ದಾರೆಂದು ಗೊತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣವು ತನಿಖೆಯ ಹಂತದಲ್ಲಿದೆ. ಹೀಗಾಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಟ್ಟು ಕೊಡಲು ಆಗುವುದಿಲ್ಲ. ಎಸ್ಐಟಿ ತನಿಖೆಯು ಚುರುಕಾಗಿ ನಡೆಯುತ್ತಿದ್ದು, ತನಿಖೆ ಪೂರ್ಣವಾದ ಬಳಿಕ ಎಲ್ಲವೂ ಸಾರ್ವಜನಿಕವಾಗಿ ಗೊತ್ತಾಗಲಿದೆ ಎಂದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾದ ಅತ್ಯಾಚಾರ, ಅಶ್ಲೀಲ ಆರೋಪದ ಈ ಪ್ರಕರಣವು ಹೊರ ಬೀಳುತ್ತಿದ್ದಂತೆ, ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ತನಿಖೆ ಬಿಸಿ ಹೆಚ್ಚಾದಂತೆ ಒಂದು ತಿಂಗಳ ಬಳಿಕೆ ತಾನಾಗಿಯೇ ಎಸ್ಐಟಿಗೆ ಬಂದು ಶರಣಾಗಲು ವಿಡಿಯೋ ಮೂಲಕ ಹೇಳಿಕೆ ನೀಡಿದ್ದು ಗೊತ್ತೇ ಇದೆ.