ಚಿತ್ರದುರ್ಗ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ತಿಳಿದ ವ್ಯಕ್ತಿಯನ್ನು ಆಕೆಯ ಪ್ರಿಯಕರನು ರಾತ್ರಿ ಮಲಗಿದ್ದ ವೇಳೆ ಪತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ದುರ್ಘಟನೆ ಹಿರಿಯೂರು ತಾಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ರವಿಕುಮಾರ್(35) ಎಂದು ಗುರುತಿಸಲಾಗಿದೆ. ಸುನಿಲ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇನ್ನು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯು ಪೊಲೀಸರ ಅತಿಥಿಯಾಗಿದ್ದಾನೆ.