ಕಾಂಡೋಮ್ ಸರಿಯಾಗಿ ಬಳಸುವ ವಿಧಾನ?

1. ಅವಧಿ ಹಾಗೂ ಪ್ಯಾಕೆಟ್ ಪರಿಶೀಲಿಸಿ:

  • ಕಾಂಡೋಮ್ ನ expiry date ನೋಡಿ.
  • ಪ್ಯಾಕೆಟ್‌ಗೆ ಹಾನಿ ಆಗಿಲ್ಲವೆಂಬುದನ್ನು ಖಾತರಿಪಡಿಸಿಕೊಳ್ಳಿ.
  • ಪ್ಯಾಕೆಟ್ ಒತ್ತಿದಾಗ ಎರ್ ಬಬಲ್ ಏಳುತ್ತಿದೆ ಎಂದಾದರೆ ಪ್ಯಾಕೆಟ್ ಚೆನ್ನಾಗಿದೆ ಎಂದರ್ಥ.

2. ಸಾವಧಾನದಿಂದ ಪ್ಯಾಕೆಟ್ ತೆರೆಯಿರಿ:

  • ಪ್ಯಾಕೆಟ್‌ನ್ನು ಕೈಯಿಂದ ನಯವಾಗಿ ತೆರೆಯಿರಿ.
  • ಹಲ್ಲು, ಕತ್ತರಿ ಅಥವಾ ಇತರೆ ಸೂಕ್ಷ್ಮ ವಸ್ತುಗಳಿಂದ ತೆರೆಯಬೇಡಿ. ಏಕೆಂದರೆ ಕಾಂಡೋಮ್ ಹಾನಿಗೊಳಗಾಗಬಹುದು.

3. ಸುರುಳಿ ಯಾವ ಕಡೆ ಇದೆ ಎಂದು ಖಚಿತಪಡಿಸಿಕೊಳ್ಳಿ:

  • ಕಾಂಡೋಮ್ ಟೋಪಿಯ ಹಾಗೆ ಕಾಣಿಸಬೇಕು, ತುದಿ ಹೊರಗೆ ಇರಬೇಕು.
  • ಮಿಸ್ ಆಗಿ ತಪ್ಪಾಗಿ ಹಾಕಿಕೊಂಡರೆ ಹೊಸದನ್ನು ಬಳಸಿ.

4. ಅಂಚಿನ ತುದಿಯನ್ನು ನೆಪ್ಪಿ ಹಿಡಿಯಿರಿ

  • ವೀರ್ಯ ಶೇಖರಣೆಯಾಗಲು ಕಾಂಡೋಮ್ ತುದಿಯನ್ನು ಸ್ವಲ್ಪ ಕಿತ್ತು ಹಿಡಿಯಿರಿ. ಇದರಿಂದ ತೊಂದರೆ ಇಲ್ಲದೆ ವೀರ್ಯ ಹೊರಬರಲಿದೆ.

5. ಶಿಶ್ನದ ಸುತ್ತಲೂ ಪೂರ್ಣವಾಗಿ ಉರುಳಿಸಿ:

  • ಉತ್ತೇಜಿತ ಸ್ಥಿತಿಯಲ್ಲಿರುವ ಲಿಂಗದ ಮೇಲೆ ಕಾಂಡೋಮ್ ಇಟ್ಟು, ಕೊನೆಯ ತುದಿಯವರೆಗೆ ಉರುಳಿಸಿ.
  • ತುದಿ ಅಂಟಿಕೊಳ್ಳದಂತೆ ನೋಡಿಕೊಳ್ಳಿ.

6. ಲ್ಯುಬ್ರಿಕೇಂಟ್ ಬಳಸಿ:

  • ಸುಲಭವಾಗಿ ಹಾಕಿಕೊಳ್ಳಲು ಸಿಲಿಕೋನ್ ಆಧಾರಿತ ಲೂಬ್ ಬಳಸಿ.
  • ವೆಸ್ಲಿನ್, ತೆಂಗಿನೆಣ್ಣೆಯಂತಹ ದ್ರವವನ್ನು ಬಳಸಬೇಡಿ. ಏಕೆಂದರೆ ಇವುಗಳಿಂದ ಕಾಂಡೋಮ್ ನಾಶವಾಗಬಹುದು.

7. ಸಂಭೋಗದ ನಂತರ ಎಚ್ಚರಿಕೆಯಿಂದ ತೆಗೆಯಿರಿ:

  • ವೀರ್ಯ ಸ್ಖಲನವಾದ ನಂತರ ಕಾಂಡೋಮ್ ಅನ್ನು ನಯವಾಗಿ ಹಿಡಿದು ಹೊರ ತೆಗೆಯಿರಿ.

8. ಸರಿಯಾದ ರೀತಿಯಲ್ಲಿ ಸಂಗ್ರಹಿಸಿ, ವಿಸರ್ಜಿಸಿ:

  • ಬಳಸಿದ ಕಾಂಡೋಮ್ ಅನ್ನು ಕಾಗದದಲ್ಲಿ ಕಟ್ಟಿ ಬಿಸಾಡಿ.
  • ಇದನ್ನು ಶೌಚಾಲಯದ ಪೈಪಿಗೆ ಹಾಕಬೇಡಿ, ಬದಲಾಗಿ ಕಸದ ಬುಟ್ಟಿಗೆ ಹಾಕಿ.

⚠️ ಈ ತಪ್ಪುಗಳನ್ನು ಮಾಡಬೇಡಿ:

  • ಲೈಂಗಿಕ ಸಂಪರ್ಕ ಮಾಡಿದ ನಂತರ ಲಿಂಗಕ್ಕೆ ಕಾಂಡೋಮ್ ಹಾಕುವುದು.
  • ಎರಡು ಕಾಂಡೋಮ್ ಒಂದೇ ಬಾರಿಗೆ ಬಳಸುವುದು.
  • ಬಳಸಿದ ಕಾಂಡೋಮ್ ಅನ್ನೇ ಪುನಃ ಬಳಸುವುದು.
  • ತುದಿಗೆ ಜಾಗ ಬಿಡದೆ ಹಾಕಿಕೊಳ್ಳುವುದು.
  • ಕಾಂಡೋಮ್ ಅನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವುದು.

Leave a Reply

Your email address will not be published. Required fields are marked *