ಸಂಗಾತಿಯೊಂದಿಗೆ ಲೈಂಗಿಕತೆ ಬಗ್ಗೆ ಸಂವಹನ ನಡೆಸುವುದು ಕೆಲವೊಮ್ಮೆ ಸವಾಲಾಗಬಹುದು. ಆದರೆ ಇದು ಆರೋಗ್ಯಕರವಾಗಿರಬೇಕು, ಪರಸ್ಪರ ಗೌರವಪೂರ್ಣವಾಗಿರಬೇಕು. ಹಾಗಿದ್ದರೆ ಮಾತ್ರ ತೃಪ್ತಿದಾಯಕ ಸಂಬಂಧ ಎನಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಳವಾದ ಮತ್ತು ಉಪಯುಕ್ತವಾದ ಮಾರ್ಗದರ್ಶನವನ್ನು ಇಲ್ಲಿ ನೀಡಲಾಗಿದೆ.
1. ಸರಿಯಾದ ಸಮಯ & ಸ್ಥಳ ಆರಿಸಿಕೊಳ್ಳಿ:
ಲೈಂಗಿಕ ಕ್ರಿಯೆ ನಡೆಸುವ ಮುನ್ನ ಅಥವಾ ನಡೆಸಿದ ತರುವಾಯ ಹೊರತುಪಡಿಸಿ ಇಬ್ಬರೂ ವಿಶ್ರಾಂತಿಯಿಂದ ಇರುವಾಗ ಲೈಂಗಿಕತೆ ಬಗ್ಗೆ ಮಾತನಾಡಿ. ಇದಕ್ಕಾಗಿ ಗೌಪ್ಯವಾಗಿರುವ ಮತ್ತು ನೆಮ್ಮದಿಯ ಸ್ಥಳವನ್ನು ಆಯ್ಕೆ ಮಾಡಿ.
2. ಸೌಮ್ಯವಾಗಿ ಮಾತನಾಡಿ:
ಸಕಾರಾತ್ಮಕ ವಿಚಾರ ಪ್ರಸ್ತಾಪಿಸುವ ಮುಖೇನ ವಿಷಯ ಆರಂಭಿಸಿ: ಉದಾಹರಣೆಗೆ ನಿಮ್ಮ ಮಾತು ಹೀಗಿರಲಿ.
🗨️ “ನಿನ್ನ ಹತ್ತಿರ ಇರೋದ್ರಿಂದ ನನಗೆ ತುಂಬಾ ಖುಷಿ ಆಗುತ್ತೆ…”
🗨️ “ನನಗೆ ನೆನೆಪಾಗ್ತಾ ಇರೋ ಒಂದು ವಿಷ್ಯಾನ ಹಂಚಿಕೊಳ್ಲಾ?”
3. ಗೌರವಯುತವಾಗಿ ವಿಶ್ವಾಸ ಗಳಿಸಿ:
“ನೀನು” ಎನ್ನುವ ಬದಲು “ನಾನು” ಎಂದೇ ಮಾತನ್ನು ಆರಂಭಿಸಿ:
✅ “ಹೊಸದನ್ನು ಆರಂಭಿಸಲು ನನಗೆ ನಾಚಿಕೆ ಆಗುತ್ತದೆ.”
❌ “ನೀನು ಈವರೆಗೆ ಹೊಸತನ್ನು ಪ್ರಯತ್ನಿಸಿಯೇ ಇಲ್ಲವೇ?”
4. ಮಿತಿಗಳ ಬಗ್ಗೆ ನಿರ್ಧರಿಸಿ:
ಇಬ್ಬರ ಇಚ್ಛೆಗಳು, ಇಚ್ಛೆ ಇಲ್ಲದ ವಿಚಾರ ಮತ್ತು ಮಿತಿಗಳ ಬಗ್ಗೆ ಅರಿತುಕೊಳ್ಳಿ:
🗨️ “ನಿನಗೆ ಇಷ್ಟವಿಲ್ಲದ ವಿಚಾರ ಏನಾದರೂ ಇದೆಯೇ?”
🗨️ “ನಾವು ಇಬ್ಬರೂ ಒಟ್ಟಿಗೆ ಇರುವಾಗ ನಿನಗೆ ಸುರಕ್ಷತೆ ಎನಿಸುತ್ತದೆಯೇ?”
5. ಫೀಡ್ ಬ್ಯಾಕ್ ನೀಡುವಾಗ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ:
ವಿರೋಧಿಸುವಂತಹ ಮಾತನ್ನು ಮಾತನಾಡಬೇಡಿ. ಸಂಗಾತಿ ಏನಾದರೂ ಹಂಚಿಕೊಂಡರೆ ಅದನ್ನು ಶಾಂತವಾಗಿ ಆಲಿಸಿ:
🗨️ “ನನ್ನ ಹತ್ತಿರ ಹಳಿಕೊಂಡಿದ್ದಕ್ಕೆ ಧನ್ಯವಾದ. ಈ ವಿಚಾರವನ್ನು ಇಬ್ಬರೂ ಸೇರಿ ಡೀಲ್ ಮಾಡೋಣ.”
6. ಸರಳ ಭಾಷೆ ಬಳಸಿ
ಕಷ್ಟಕರ ಎನಿಸುವಂತಹ ಪದಗಳನ್ನು ಬಳಸಬೇಡಿ. ಬದಲಾಗಿ ಇಬ್ಬರಿಗೂ ಅರ್ಥವಾಗುವ ಸರಳ ಪದಗಳನ್ನು ಬಳಸಿ.
7. ಒಪ್ಪಿಗೆ ಬಗ್ಗೆ ಸ್ಪಷ್ಟ ಮಾಡಿಕೊಳ್ಳಿ:
ಒಪ್ಪಿಗೆಯು ಪರಸ್ಪರವಾಗಿರಬೇಕು, ಉತ್ಸಾಹಭರಿತವಾಗಿರಬೇಕು ಮತ್ತು ನಿರಂತರವಾಗಿರಬೇಕು.
🗨️ “ನಿನಗೆ ಹೀಗೆ ಓಕೆನಾ?” ಅಥವಾ “ಮುಂದುವರಿಸಲೇ” ಎಂದು ಕೇಳಿ.
8. ರಕ್ಷಣೆ & ಆರೋಗ್ಯದ ಬಗ್ಗೆ ಮಾತನಾಡಿಕೊಳ್ಳಿ:
ಲೈಂಗಿಕ ಕ್ರಿಯೆ ಆರಂಭಿಸುವ ಮುನ್ನ ಗರ್ಭ ನಿರೋಧಕಗಳಾದ ಕೊಂಡೋಮ್ ಬಳಕೆ ಮತ್ತು STI ಪರೀಕ್ಷೆಯಂತಹ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ:
🗨️ “ನೀನು ಈ ಹಿಂದೆ ಯಾವಾಗಲಾದರೂ ಯಾವುದಾದರೂ ಪರೀಕ್ಷೆ ಮಾಡಿಸಿಕೊಂಡಿದ್ದೀಯಾ?”
🗨️ “ನಾವಿಬ್ಬರೂ ರಕ್ಷಣೆ ಮಾಡಿಕೊಳ್ಳೋಣವೇ?”
9. ಸಂಭಾಷಣೆ ನಿರಂತರವಾಗಿರಲಿ:
ಲೈಂಗಿಕತೆ ಬಗೆಗಿನ ಮಾತು ಒಮ್ಮೆಗೇ ಮುಗಿದು ಹೋಗುವುದಲ್ಲ. ಈ ವಿಚಾರದ ಬಗ್ಗೆ ನಿರಂತರವಾಗಿ ಮಾತನಾಡುತ್ತಲೇ ಇರಿ.
🗨️ “ನೀನು ಹೊಸದನ್ನು ಏನಾದರೂ ಪ್ರಯತ್ನಿಸಬೇಕು ಭಾವಿಸುತ್ತಿದ್ದೀಯಾ?”
🗨️ “ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಿದೆಯೇ?”