ಕರ್ನಾಟಕ: Property Registration ಹೇಗೆ?

ಆಸ್ತಿ ನೋಂದಣಿಯು ಆಸ್ತಿಯ ಹಕ್ಕನ್ನು ಸರ್ಕಾರದ ದಾಖಲೆಗಳಲ್ಲಿ ಕಾನೂನಾತ್ಮಕವಾಗಿ ದಾಖಲಿಸುವ ಪ್ರಕ್ರಿಯೆಯಾಗಿದ್ದು, ಇದನ್ನು ನೋಂದಣಿ ಕಾಯ್ದೆ, 1908ರ ಅಡಿಯಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಇದು ಮುದ್ರಂಕ ಮತ್ತು ನೋಂದಣಿ ಇಲಾಖೆ ಅಡಿಯಲ್ಲಿ ನಡೆಯುತ್ತದೆ.

📄 ಅಗತ್ಯವಿರುವ ದಾಖಲೆಗಳ ಪಟ್ಟಿ:
ಕಾನೂನಾತ್ಮಕ ಒಪ್ಪಂದದ ದಾಖಲೆಯಾಗಿ ಮಾರಾಟ ಒಪ್ಪಂದ, ಗುರುತಿಗಾಗಿ ಪಾನ್ ಕಾರ್ಡ್, ಆಧಾರ್ ಕಾರ್ಡುಗಳು, ಸಾಲ ಇಲ್ಲದ ದಾಖಲೆಯಾಗಿ ಅಡ್ಡಹಕ್ಕು ಪ್ರಮಾಣಪತ್ರ(EC), ತೆರಿಗೆ ದಾಖಲೆಯಾಗಿ ಖಾತಾ ಪ್ರಮಾಣಪತ್ರ, ಹಕ್ಕು ದಾಖಲೆಯಾಗಿ ಪಹಣಿ/ಮ್ಯುಟೇಷನ್, ಶುಲ್ಕ ಪಾವತಿಯ ದಾಖಲೆಯಾಗಿ ಡಿಡಿ/ಇ-ಚಲನ್ ಪಡೆಯಿರಿ.

🔹 1. ಟೈಟಲ್ & ದಾಖಲೆ ಪರಿಶೀಲಿಸಿ:

ನೋಂದಣಿಗೆ ಮುನ್ನ ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

  • ಮಾರಾಟ ಮಾಡುತ್ತಿರುವವರು ಕಾನೂನಾತ್ಮಕವಾಗಿ ಆಸ್ತಿಯ ಮಾಲೀಕರಾಗಿದ್ದಾರೆಯೇ?
  • ಆಸ್ತಿಯ ಹಕ್ಕು ಸ್ಪಷ್ಟವಾ ನಮೂದಾಗಿದೆಯೇ?
  • ಆಸ್ತಿ ಮೇಲೆ ಯಾವುದಾದರೂ ಸಾಲವಿದೆಯೇ ಅಥವಾ ಯಾವುದೇ ರೀತಿಯ ನ್ಯಾಯಾಂಗ ಪ್ರಕರಣಗಳು ಬಾಕಿ ಇವೆಯೇ?

🔍 ಪರಿಶೀಲಿಸಬೇಕಾದ ಪ್ರಮುಖ ದಾಖಲೆಗಳು:

  • ಮಾರಾಟದ ಒಪ್ಪಂದ ಪತ್ರ / ಹಳೆಯ ಹಕ್ಕುಪತ್ರ(Sale Deed / Parent Deed / Gift Deed)
  • RTC (ಹಕ್ಕು ಮತ್ತು ಬೆಳೆ ದಾಖಲೆ)
  • ಅಡ್ಡಹಕ್ಕು ಪ್ರಮಾಣಪತ್ರ (EC)-Form 15
  • ನಿರ್ಮಾಣ ಅನುಮತಿ ನಕ್ಷೆ(Approved Building Plan)
  • ಖಾತಾ ಪ್ರಮಾಣಪತ್ರ ಮತ್ತು ಎಕ್ಸ್‌ಟ್ರಾಕ್ಟ್ (BBMP ಅಥವಾ ಸ್ಥಳೀಯ ಸಂಸ್ಥೆಯಿಂದ)

🔹 2. ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಪಾವತಿಸಿ:

ನೋಂದಣಿಗೂ ಮುನ್ನ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಲೇಬೇಕು.

💰 2024ರ ಪ್ರಕಾರ ಸಾಮಾನ್ಯ ಶುಲ್ಕಗಳು:

  • ಸ್ಟಾಂಪ್ ಡ್ಯೂಟಿ: ಆಸ್ತಿಯ ಮೌಲ್ಯದ ಪೈಕಿ 3% ರಿಂದ 5%
  • ನೋಂದಣಿ ಶುಲ್ಕ: ಆಸ್ತಿಯ ಮೌಲ್ಯದ ಪೈಕಿ 1%
  • ಸೆಸ್ / ಅಧಿಕ ಶುಲ್ಕಗಳು: ಹೆಚ್ಚುವರಿಯಾಗಿ 0.5%–2% (ಆಸ್ತಿಯ ಪ್ರಕಾರ ಮತ್ತು ಸ್ಥಳವನ್ನು ಆಧರಿಸಿರುತ್ತದೆ)
  • ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪರಿಶೀಲಿಸಲು Kaveri Online Services ವೆಬ್‌ಸೈಟ್‌ಗೆ ಭೇಟಿ ನೀಡಿ

🔹 3. ಮಾರಾಟದ ಒಪ್ಪಂದ (Sale Deed) ಸಿದ್ಧಪಡಿಸಿ:

ಮಾರಾಟದ ಒಪ್ಪಂದವು ಮುಖ್ಯ ಕಾನೂನು ಪತ್ರವಾಗಿದೆ:

  • ಇದನ್ನು ತಯಾರಿಸಲು ಸ್ಟ್ಯಾಂಪ್ ಪೇಪರ್ ಬಳಸಬೇಕು.
  • ವಕೀಲರು ಅಥವಾ ದಾಖಲಾತಿ ಬರಹಗಾರರಿಂದ ಚೊಕ್ಕವಾಗಿ ಬರೆಸಿ.
  • ಇದಕ್ಕೆ ಮಾರಾಟಗಾರರು, ಖರೀದಿರಾರರು ಮತ್ತು ಸಾಕ್ಷಿಗಳು ಸಹಿ ಹಾಕಬೇಕು.

🔹 4. Kaveri Portalನಲ್ಲೇ Appointment Book ಮಾಡಿ:

ದೂರದರ್ಶನಕ್ಕೆ: https://kaverionline.karnataka.gov.in

ಪೋರ್ಟಲ್ ನಲ್ಲಿ ಸೇವೆಗಳು ವಿಭಾಗಕ್ಕೆ ತೆರಳಿ, ಅಲ್ಲಿ

  • ಆಸ್ತಿ ಮೌಲ್ಯ
  • ಸ್ಟಾಂಪ್ ಡ್ಯೂಟಿ
  • Appointment Booking ಮಾಡಿ, ನಂತರ
  • ಅಡ್ಡಹಕ್ಕು ಪ್ರಮಾಣಪತ್ರ(Encumbrance Certificate) ಡೌನ್‌ಲೋಡ್ ಮಾಡಿಕೊಳ್ಳಿ.

🔹 5. ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ:

ನಿಗದಿತ ದಿನಾಂಕದಂದು ಮುಂದಿನ ಪ್ರಕ್ರಿಯೆಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ. ಈ ವೇಳೆ,

  • ಮಾರಾಟಗಾರರು, ಖರೀದಿದಾರರು, ಹಾಗೂ ಇಬ್ಬರು ಸಾಕ್ಷಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗಬೇಕು.
  • ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ.
  • ಅಲ್ಲಿನ ಸಿಬ್ಬಂದಿ ಆಧಾರ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸುತ್ತಾರೆ.
  • ಈ ಮೊದಲೇ ಪಾವತಿಸಿಲ್ಲ ಎಂದಾದಲ್ಲಿ, ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿ.
  • ಉಪ ನೋಂದಣಾಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ನೋಂದಾಯಿಸಿ ಕೊಡುತ್ತಾರೆ. 

🔹 6. ನೋಂದಾವಣೆ ಆದ ನಂತರ ಮಾರಾಟ ಒಪ್ಪಂದ ಪಡೆಯಿರಿ: ಆಸ್ತಿಯನ್ನು ಯಶಸ್ವಿಯಾಗಿ ನೋಂದಾವಣೆ ಮಾಡಿದ ತರುವಾಯ,

  • ಡಿಜಿಟಲ್ ಸಹಿ ಹೊಂದಿರುವ “ನೋಂದಾಯಿತ ಮಾರಾಟ ಒಪ್ಪಂದ” ಒದಗಿಸಲಾಗುತ್ತದೆ.
  • ಖಾತಾ ದಾಖಲೆ ಮತ್ತು ಅಡ್ಡಹಕ್ಕು ಪ್ರಮಾಣಪತ್ರ(EC)ವನ್ನೂ ನವೀಕರಿಸಲಾಗುತ್ತದೆ. ಅವುಗಳನ್ನು ತಪ್ಪದೆ ಪಡೆದಿಟ್ಟುಕೊಳ್ಳಿ.

⚠️ ಮುನ್ನೆಚ್ಚರಿಕೆ:

  • ಆಸ್ತಿಯ ಕಾನೂನಾತ್ಮಕ ಸ್ಥಿತಿ ಪರಿಶೀಲಿಸಿ.
  • DC conversion ಆಗಿದೆಯೇ ನೋಡಿಕೊಳ್ಳಿ.
  • ವಕೀಲರಿಂದ ಕಾನೂನು ಅಭಿಪ್ರಾಯ ಪಡೆಯಿರಿ.
  • ಆಸ್ತಿಯ ಟೈಟಲ್ ಮತ್ತು EC ಪರಿಶೀಲನೆ ಅಗತ್ಯ.

📞 ಉಪಯುಕ್ತ ಸಂಪರ್ಕಗಳು:

Leave a Reply

Your email address will not be published. Required fields are marked *