ವಾರ್ಷಿಕ FastTag ಪಾಸ್ ಅನ್ನು ಆನ್​ಲೈನ್​ನಲ್ಲಿ Activate ಮಾಡುವುದು ಹೇಗೆ?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಆ.15ರಂದು ವಾರ್ಷಿಕ ಫಾಸ್ಟ್​ಟ್ಯಾಗ್ ಪಾಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಪಾಸ್ ಪಡೆಯಲು ಯಾರು ಅರ್ಹರು ಎಂಬ ಕೆಲ ಸೂಚನೆಗಳನ್ನು ಈ ಹಿಂದಿನ ಸುದ್ದಿಯಲ್ಲಿ ನೋಡಿದ್ದೇವೆ. ಇದೀಗ ಪಾಸ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

>ಮೊದಲು, ನೀವು ಈಗಾಗಲೇ ಬಳಸುತ್ತಿರುವ FASTag ಸಕ್ರಿಯವಾಗಿದೆಯೇ, ಅದನ್ನು ವಾಹನಕ್ಕೆ ಅಂಟಿಸಲಾಗಿದೆಯೇ ಮತ್ತು ಮಾನ್ಯವಾದ ವಾಹನ ನೋಂದಣಿ ಸಂಖ್ಗೆ(VRN)ಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

>Rajmarg Yatra ಮೊಬೈಲ್ ಆಪ್ ಅಥವಾ ಅಧಿಕೃತ NHAI ವೆಬ್‌ಸೈಟ್‌ಗೆ ಭೇಟಿ ನೀಡಿ.

>ನಿಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು FASTag ID ಸೇರಿದಂತೆ ಇತರೆ ವಿವರಗಳನ್ನು ನಮೂದಿಸಿ.

>₹3,000/- ರೂಪಾಯಿಯ ಶುಲ್ಕವನ್ನು ಒಂದು ಬಾರಿ ಪಾವತಿಸುತ್ತಿರುವುದಾಗಿ ಆಯ್ಕೆಯನ್ನು ಆರಿಸಿ.

>ಶುಲ್ಕ ಸಂದಾಯವಾದ ಕೂಡಲೇ ವಾರ್ಷಿಕ ಪಾಸ್ Activate ಆಗುತ್ತದೆ.

>ತರುವಾಯ ನಿಮ್ಮ FASTagಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಖಚಿತತೆಯ SMS ಕೂಡ ಬರುತ್ತದೆ.

Leave a Reply

Your email address will not be published. Required fields are marked *