ಬೆಂಗಳೂರು: ರಾಜ್ಯದ ಒಟ್ಟು ಕುಟುಂಬಗಳ ಪೈಕಿ ಶೇ.೮೦ರಷ್ಟು ಬಿಪಿಎಲ್ ಕಾರ್ಡುಗಳಿವೆ ಎಂಬ ಮಾಹಿತಿ ಆಧಾರದ ಮೇಲೆ ನಿನ್ನೆ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವಂತೆ ಖಡಕ್ಕಾಗಿ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ ಆದೇಶದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದೇ ಆದರೆ, ಸಾಕಷ್ಟು ಪಡಿತರ ಚೀಟಿಗಳು ಸ್ಥಗಿತಗೊಳ್ಳಲಿವೆ. ಪರಿಣಾಮ ಗೃಹಲಕ್ಷ್ಮಿ ಯೋಜನೆ ಅಡಿ ಫಲಾನುಭವಿಗಳಾಗಿರುವ ಕೆಲ ಮಹಿಳೆಯರ ಮೇಲೂ ಇದರ ದುಷ್ಪರಿಣಾಮ ಬೀರಲಿದ್ದು, ಸಹಾಯಧನ ಕಡಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಪಡಿತರ ಚೀಟಿಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿತ್ತು. ಯೋಜನೆ ಅಡಿ ಕುಟುಂಬದ ಯಮಾನಿಯರಿಗೆ ತಿಂಗಳಿಗೆ ೨೦೦೦ ರೂ. ಸಹಾಯಧನ ನೀಡಲಾಗುತ್ತಿದೆ.