ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ (South Canara District Central Co-operative Bank Ltd.)ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 123(ಸಾಮಾನ್ಯ: 62, ಎಸ್ಸಿ: 18, ಎಸ್ಟಿ: 4, ಪ್ರವರ್ಗ-1: 5, 2ಎ: 18, 2ಬಿ: 5, 3ಎ: 5, 3ಬಿ: 6) ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಆಸಕ್ತಿಯುಳ್ಳವರು ಆನ್ಲೈನ್ ಮುಖೇನ ಅರ್ಜಿ ಸಲ್ಲಿಸಬಹುದು.
ಅಂಗೀಕೃತ ವಿವಿಯಿಂದ ಕನಿಷ್ಠ 50% ಅಂಕ ಗಳಿಸಿದ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನದ ಕನಿಷ್ಠ 6 ತಿಂಗಳಿಗೆ ಕಡಿಮೆಯಿಲ್ಲದ ತರಬೇತಿ ಸಹಿತ ಸರ್ಟಿಫಿಕೆಟ್ ಹೊಂದಿರಬೇಕು. ಆಯ್ಕೆಯಾದವರು ಆರಂಭಿಕವಾಗಿಯೇ 24,910 ರೂ. ಮೂಲ ವೇತನ ಹಾಗೂ ಡಿಎ & ಎಚ್.ಆರ್.ಎ ಪಡೆಯಲು ಅರ್ಹರಿರುತ್ತಾರೆ.
ಸಾಮಾನ್ಯ ಮತ್ತು ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 1,180 ರೂ. ಹಾಗೂ ಎಸ್ಸಿ/ ಎಸ್ಟಿ/ ಪ್ರ-1ರ ಅಭ್ಯರ್ಥಿಗಳು 590 ರೂ. ಶುಲ್ಕ ಪಾವತಿಸಬೇಕಿದೆ.
ಕನಿಷ್ಠ 18 & ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭಿಸಲಿದೆ.
ಇನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮುಖೇನ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
SCDCC Bank Recruitment 2024ರ ಅಧಿಸೂಚನೆ
ಹೆಚ್ಚಿನ ಮಾಹಿತಿಗೆ: (0824) – 2440381, 2440882 ನಂಬರ್ಗೆ ಕರೆ ಮಾಡಿ.