ಆ.15ಕ್ಕೆ ಖಾಸಗಿ ವಾಹನ ಮಾಲೀಕರಿಗೆ GOOD NEWS!

ಪ್ರತಿ ದಿನವೂ ಲಕ್ಷಾಂತರ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುತ್ತಿರುತ್ತವೆ. ನಾಲ್ಕು ಚಕ್ರದ ವಾಹನಗಳ ಚಾಲಕರಿಗೆ ಟೋಲ್ ಬೂತ್‌ಗಳು ಸಾಮಾನ್ಯ ಅನುಭವವಾಗಿವೆ. ಟೋಲ್ ಪಾವತಿಯನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಸರ್ಕಾರವು FASTag ವ್ಯವಸ್ಥೆಯನ್ನು ಪರಿಚಯಿಸಿದೆ. ಇದು ಸರಳವಾದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯಾಗಿದ್ದು, ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

ಇದೀಗ, ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವ ಮಹತ್ವದ ಹೆಜ್ಜೆಯನ್ನಿಟ್ಟಿರುವ ಸರ್ಕಾರ, ವಾರ್ಷಿಕ FASTag ಪಾಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಪದೇಪದೆ ರೀಚಾರ್ಜ್ ಮಾಡುವ ತೊಂದರೆ ನಿವಾರಣೆಯಾಗುವ ಜೊತೆಗೆ, ಹೆದ್ದಾರಿಗಳಲ್ಲಿನ ಪ್ರಯಾಣವು ಇನ್ನಷ್ಟು ಸರಳವಾಗಲಿದೆ.

ರೀಚಾರ್ಜ್‌ಗೆ ಹೇಳಿ ವಿದಾಯ: ವಾರ್ಷಿಕ FASTag ಪಾಸ್ ನಿಂದ ಏನು ಲಾಭ?

ಹೊಸ ವಾರ್ಷಿಕ FASTag ಪಾಸ್ ಮೂಲಕ ವಾಹನಗಳ ಮಾಲೀಕರು ತಮ್ಮ FASTag ಖಾತೆಗೆ ಪದೇಪದೆ ರೀಚಾರ್ಜ್ ಮಾಡುವ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ₹3,000 ಬೆಲೆಯಲ್ಲಿ ಲಭ್ಯವಿರುವ ಈ ಪಾಸ್ ಗೆ ಒಮ್ಮೆಲೇ ಪಾವತಿಸಬೇಕಿದ್ದು, ವರ್ಷಕ್ಕೆ 200 ಪ್ರಯಾಣಗಳಿಗೆ ಮಾನ್ಯವಾಗಿರುತ್ತದೆ.

ಇದು ಹೆದ್ದಾರಿಗಳಲ್ಲಿ ನಿಯಮಿತವಾಗಿ ಪ್ರಯಾಣ ಮಾಡುವವರಿಗೆ ಒಂದು ಗೇಮ್ ಚೇಂಜರ್ ಆಗಿದ್ದು, ಹಣ ಮತ್ತು ಸಮಯವನ್ನು ಉಳಿಸುವ ಜೊತೆಗೆ ಚಾಲಕರ ಮನಸ್ಸು ಶಾಂತಿಯಿಂದ ಇರಲೂ ಕಾರಣವಾಗುತ್ತದೆ. ಇದರಿಂದ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಅಲರ್ಟ್ ಗಳೂ ಬರುವುದಿಲ್ಲ, ಟೋಲ್ ತಪ್ಪಿಸಿಕೊಳ್ಳಬೇಕು ಎಂಬ ಆತಂಕವೂ ಇರುವುದಿಲ್ಲ. ಒಂದೇ ಬಾರಿ ಸರಳವಾಗಿ ಪಾವತಿಸುವ ಈ ವ್ಯವಸ್ಥೆಯು ನಿಮ್ಮ ವರ್ಷಪೂರ್ತಿ ಪ್ರಯಾಣವನ್ನು ಸುಗಮಗೊಳಿಸುತ್ತದೆ.

ವಾರ್ಷಿಕ FASTag ಪಾಸ್ ಪಡೆಯುವುದು ಹೇಗೆ?

ನೀವು ಈ ವಾರ್ಷಿಕ ವ್ಯವಸ್ಥೆಗೆ ಇನ್ನೂ ಪರಿವರ್ತನೆ ಆಗಿಲ್ಲವೇ? ಇನ್ಮುಂದೆ ಅದು ತುಂಬಾ ಸುಲಭವಾಗಿರಲಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ವಾರ್ಷಿಕ ಪಾಸ್ ಪಡೆಯುವ ಮತ್ತು ನವೀಕರಿಸುವ ಪ್ರಕ್ರಿಯೆಯು ಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಇದಕ್ಕಾಗಿ ಯಾವುದೇ ಕಾಗದ ಪತ್ರಗಳ ಅವಶ್ಯಕವಿಲ್ಲ, ಸಾಲಿನಲ್ಲಿ ಕಾದು ಕುಳಿತುಕೊಳ್ಳುವ ಗೋಜೂ ಇಲ್ಲ ಎಂದಿದ್ದಾರೆ.

ರಾಜ್ ಮಾರ್ಗ್ ಯಾತ್ರಾ ಮೊಬೈಲ್ ಆ್ಯಪ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ(MoRTH)ದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಶೀಘ್ರದಲ್ಲೇ ಈ ವಾರ್ಷಿಕ ಪಾಸ್ ನ ಲಿಂಕ್ ಲಭ್ಯವಾಗಲಿದೆ. ಆ ಬಳಿಕ ಬಳಕೆದಾರರು ಕೇವಲ ಕೆಲವು ಕ್ಲಿಕ್ಕುಗಳಿಂದಲೇ ಸಂಪೂರ್ಣ ಪ್ರಕ್ರಿಯೆಯನ್ನು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳಿಸಬಹುದಾಗಿದೆ.

2025ರ ಆಗಸ್ಟ್ 15ರಂದು ವಾರ್ಷಿಕ FASTag ಪಾಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.

ಈ ಯೋಜನೆ ಪ್ರಾರಂಭವಾದ ನಂತರ, ಚಾಲಕರು ತಮ್ಮ FASTag ಖಾತೆಗೆ ರಾಜ್ ಮಾರ್ಗ್ ಯಾತ್ರಾ ಆ್ಯಪ್ ಅಥವಾ ಸಂಬಂಧಿತ ಸರ್ಕಾರಿ ಪೋರ್ಟಲ್‌ಗಳ ಮೂಲಕ ಲಾಗಿನ್ ಮಾಡಿಕೊಳ್ಳಬಹುದು. 

ಈ ಪ್ರಕ್ರಿಯೆಯು ಹಂತ ಹಂತವಾಗಿ ಹೇಗಿರಲಿದೆ ಎಂಬ ಕುರಿತಾದ ಸಂಪೂರ್ಣ ಸೂಚನೆಗಳನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಸರ್ಕಾರ ಈಗಾಗಲೇ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಸಿದ್ಧಪಡಿಸುತ್ತಿರುವುದು ದೃಢಪಟ್ಟಿದೆ.

ಈ ಪಾಸ್‌ಗಾಗಿ ವಾರ್ಷಿಕ ವಿಮರ್ಶೆ (Annual Review) ಕೂಡ ನಡೆಯಲಿದೆ. ಇದು ಚಾಲಕರ ಪ್ರತಿಕ್ರಿಯೆಯ ಆಧಾರದ ಮೇಲೆ ನಿರಂತರ ಸುಧಾರಣೆ ಮಾಡಲಾಗುತ್ತದೆ. ಇದು ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲು ಸಹಾಯ ಮಾಡಲಿದೆ.

Leave a Reply

Your email address will not be published. Required fields are marked *