ಭಾರತದ 9 ಭಾಷೆಗಳಿಗೆ ಇನ್ಮುಂದೆ ಭಾಷಾಂತರ ಸೇವೆ ಒದಗಿಸುವುದಾಗಿ ಗೂಗಲ್ ಸಂಸ್ಥೆಯು ನಿನ್ನೆ ಘೋಷಿಸಿದೆ. ಈ ಪೈಕಿ ಕರ್ನಾಟಕದ ಕರಾವಳಿ ಜನರಾಡುವ ತುಳು ಭಾಷೆಯೂ ಸ್ಥಾನ ಪಡೆದಿದೆ ಎಂಬುದೇ ಸಂತಸದ ಸಂಗತಿ. ಇದರೊಂದಿಗೆ ಗೂಗಲ್ 110 ಭಾಷೆಗಳಲ್ಲಿ ಭಾಷಾಂತರ ಸೇವೆ ಒದಗಿಸುತ್ತಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಕೆಲವೆಡೆ ತುಳು ಭಾಷೆಯನ್ನು ಮಾತನಾಡುತ್ತಾರೆ. ತುಳು ಭಾಷೆಯಲ್ಲಿ ಕೆಲ ಸಿನಿಮಾಗಳೂ ಬಂದಿದ್ದು, ಈಗಲೂ ಖ್ಯಾತ ಕಲಾವಿದರು ಚಿತ್ರರಂಗದ ಯಶಸ್ಸಿಗಾಗಿ ದುಡಿಯುತ್ತಿದ್ದಾರೆ.
ಇನ್ನು ತುಳು ಭಾಷೆಗೆ ತನ್ನದೇ ಆದ ಪ್ರಾಚೀನತೆ ಇದೆಯಾದರೂ ಸ್ವಂತ ಲಿಪಿಯನ್ನು ಹೊಂದಿಲ್ಲ. ಪರಿಣಾಮ ಕನ್ನಡ ಲಿಪಿಯನ್ನೇ ತುಳು ಲಿಪಿಯನ್ನಾಗಿ ಬಳಸಲಾಗುತ್ತಿದ್ದು, ಗೂಗಲ್ ಕೂಡ ಇದನ್ನೇ ಅಳವಡಿಸಿಕೊಂಡಿದೆ.