EPF ಕುರಿತ ಸಾಮಾನ್ಯ ಪ್ರಶ್ನೆಗಳು:

1.UAN Number ಅನ್ನು ಯಾರು ಕೊಡುತ್ತಾರೆ?

>ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದ ಕಂಪನಿಯ ಹೆಚ್ಆರ್ ಕೊಡುತ್ತಾರೆ.

2.KYC update ಯಾರು ಮಾಡುತ್ತಾರೆ?

>ನೀವು ಕೆಲಸ ಮಾಡುತ್ತಿರುವ ಕಂಪನಿಯ ಹೆಚ್ಆರ್ ವಿಭಾಗದವರು ಮಾಲೀಕರ ಪರವಾಗಿ ಡಿಜಿಟಲ್ ಸೈನ್ ಮಾಡುತ್ತಾರೆ. ಅದನ್ನೇ KYC update ಎನ್ನಲಾಗುತ್ತದೆ. ಆಧಾರ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಕೆವೈಸಿ ಮಾಡುವುದು ಕಡ್ಡಾಯ.

3.Nominee ಅಂದ್ರೆ ಏನು?

>ಉದ್ಯೋಗಸ್ಥ ವ್ಯಕ್ತಿಯ ಕುಟುಂಬದ ಯಾರಾದರೂ ಓರ್ವ ಸದಸ್ಯರನ್ನು Nominee ಎನ್ನಲಾಗುತ್ತದೆ. ಉದ್ಯೋಗಿಯು ಆಕಸ್ಮಿಕವಾಗಿ ತೀರಿಕೊಂಡರೆ ಆತನ ಹಣವನ್ನು ಪಡೆಯಲು ನಾಮಿನಿ ಆದವರಿಗೆ ಅರ್ಹತೆ ಇರುತ್ತದೆ.

4.ಉದ್ಯೋಗ ತೊರೆದ ಎಷ್ಟು ದಿನಕ್ಕೆ ವಿಥ್ ಡ್ರಾ ಅರ್ಜಿ ಸಲ್ಲಿಸಬಹುದು?

>61 ದಿನಗಳ ನಂತರ(ಕೆಲ ಕಾರಣಗಳಿಗೆ ವಿನಾಯಿತಿ ಇದೆ..)

5.ಒಟ್ಟು ಮೊತ್ತದ ಎಷ್ಟಕ್ಕೆ ತೆರಿಗೆ ವಿಧಿಸಲಾಗುತ್ತದೆ?

>ಉದ್ಯೋಗಿಯು ಒಟ್ಟಾರೆ ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದು, 50000ಕ್ಕಿಂತ ಹೆಚ್ಚಿನ ಹಣವನ್ನು ತನ್ನ ಪಿಎಫ್ ಖಾತೆಯಲ್ಲಿ ಹೊಂದಿದ್ದರೆ, ಆ ಹಣಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ.

6.PAN update ಮಾಡಿದ್ರೆ ಎಷ್ಟು, ಮಾಡಿಲ್ಲ ಅಂದ್ರೆ ಎಷ್ಟು ತೆರಿಗೆ?

ಪಾನ್ ಅಪ್ಡೇಟ್ ಮಾಡಿದ್ದರೆ 10%, ಮಾಡಿಲ್ಲದಿದ್ದರೆ 30%

7.ಅರ್ಜಿ ಸಲ್ಲಿಸುವಾಗ ಏನೆಲ್ಲಾ ಬೇಕಾಗುತ್ತದೆ?

>ಮೊದಲು ಕೆವೈಸಿ(ಆಧಾರ್, ಪಾನ್, ಬ್ಯಾಂಕ್ ಖಾತೆ ಸಂಖ್ಯೆ) ಅಪ್ ಡೇಟ್ ಆಗಿರಬೇಕು.

>ಸೇವ್ ಆಗಿರುವ ಖಾತೆಯ ಖಾಲಿ ಬ್ಯಾಂಕ್ ಚೆಕ್.

>ಅಗತ್ಯವಿದ್ದರೆ ಫಾರ್ಮ್ 15 ಪಡೆದಿರಬೇಕು.

>ಆಧಾರ್ ನಂಬರ್ ಹಾಗೂ ಒಟಿಪಿ ಸ್ವೀಕರಣೆಗೆ ನೋಂದಾಯಿತ ಮೊಬೈಲ್ ನಂಬರ್ ಹೊಂದಿರಬೇಕು.

8.Mark Exxit ಎಂದರೇನು?

ಉದ್ಯೋಗಿಯು ಯಾವುದಾದರೂ ಒಂದು ಕಂಪನಿಯಲ್ಲಿ ಕಾರ್ಯ ನಿರ್ವಹಿಸಿರುತ್ತಾನೆ. ಆದರೆ ಹೆಚ್ಆರ್ ಆದವರು ಉದ್ಯೋಗಿಯ Joining ದಿನಾಂಕವನ್ನು ನಮೂದಿಸಿ, date of End ಅನ್ನು ನಮೂದಿಸಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಉದ್ಯೋಗಿಗೆ ತಾನು ಉದ್ಯೋಗ ತೊರೆದ ದಿನಾಂಕದ ಬಗ್ಗೆ ನೆನಪಿದ್ದರೆ, ಆ ದಿನಾಂಕವನ್ನು ಈ ವಿಭಾಗಕ್ಕೆ ತೆರಳಿ ಉದ್ಯೋಗಿಯೇ ಖುದ್ದು ನಮೂದು ಮಾಡಬಹುದಾಗಿರುತ್ತದೆ.

9.ಫಾರ್ಮ್ 10C ಯಾವುದಕ್ಕೆ?

ಪಿಂಚಿಣಿ ಹಣ ಹಿಂಪಡೆಯಲು ಸಲ್ಲಿಸುವ ಅರ್ಜಿಯಾಗಿದೆ.

10.Farm 19 ಯಾವುದಕ್ಕೆ ಬಳಸುತ್ತಾರೆ?

ಉದ್ಯೋಗ ತೊರೆದ ನಂತರ ಉದ್ಯೋಗಿಯ ಮತ್ತು ಮಾಲೀಕರ ಪಾಲಿನ ಹಣವನ್ನು ಪಡೆಯಲು ಸಲ್ಲಿಸುವ ಅರ್ಜಿಯಾಗಿದೆ.

11.ಮೊದಲು ಯಾವುದಕ್ಕೆ ಅರ್ಜಿ ಸಲ್ಲಿಸಬೇಕು?

ಮೊದಲು ಉದ್ಯೋಗಿ ಮತ್ತು ಉದ್ಯೋಗದಾತರ ಹಣವನ್ನು ಹಿಂಪಡೆಯಬೇಕು. ಎರಡೂ ಭಾಗದ ಹಣವನ್ನು ಒಟ್ಟಿಗೆ ಹಿಂಪಡೆಯಬಹುದು. ಬೇರೆಬೇರೆಯಾಗಿಯೂ ಪಡೆಯಬಹುದು. ಆ ತರುವಾಯವೇ ಪಿಂಚಿಣಿ ಭಾಗದ ಮೊತ್ತ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅರ್ಜಿ ತಿರಸ್ಕೃತವಾಗಲಿದೆ.

12.ಅರ್ಜಿ ಯಾವ ಕಾರಣಕ್ಕೆ ತಿರಸ್ಕೃತವಾಗಬಹುದು?

>ಆನ್ ಲೈನ್ ನಲ್ಲಿ ನಮೂದಾದ ಆಧಾರ್ ಮಾಹಿತಿಗೆ ನೀವು ನೀಡಿದ ಮಾಹಿತಿ ಹೊಂದಿಕೆ ಆಗದಿದ್ದರೆ,

>ತೆರಿಗೆ ಸಂಬಂಧಿಸಿದಂತೆ ಫಾರ್ಮ್ ೧೫ ಸಲ್ಲಿಸದಿದ್ದರೆ,

>ಚೆಕ್ ಅಥವಾ ಪಾಸ್ ಬುಕ್ ಅಪ್ಲೋಡ್ ಮಾಡದಿದ್ದರೆ,

>ಚೆಕ್ ಮೇಲೆ ಅರ್ಜಿದಾರನ ಹೆಸರು ಪ್ರಿಂಟ್ ಆಗಿಲ್ಲದಿದ್ದರೆ,
>ಪಾಸ್ ಬುಕ್ ಮೇಲೆ ಬ್ಯಾಂಕ್ ಮ್ಯಾನೇಜರ್ ಸಹಿ ಸ್ಪಷ್ಟವಾಗಿ ಕಾಣಿಸದಿದ್ದರೆ,

>ಅದಾಗಲೇ ಹಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದರೆ,

13.ಪಿಂಚಿಣಿ ಪಡೆಯಲು ನಿಗದಿಪಡಿಸಿರುವ ಕನಿಷ್ಠ ವಯಸ್ಸು ಎಷ್ಟು?

>58 ವರ್ಷ.

Leave a Reply

Your email address will not be published. Required fields are marked *