ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹತ್ತು ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ಫೈನಲ್ ತಲುಪಿದೆ. ರೋಹಿತ್ ನಾಯಕರಾಗಿ ತಂಡ ಎರಡನೇ ಬಾರಿಗೆ ಈ ಹಂತಕ್ಕೆ ತಲುಪಿದೆ. ಒಂದು ವೇಳೆ ಈ ಫೈನಲ್ ಪಂದ್ಯದಲ್ಲಿ ಭಾರತ ಸೋತರೆ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ, ಬಾರ್ಬಾಡೋಸ್ ಸಾಗರಕ್ಕೆ ಹಾರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಾರಿಯ ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆದ್ದು ಬೀಗಲೆಂದು ಅಭಿಮಾನಿಗಳು ದೇಶದೆಲ್ಲೆಡೆ ಪೂಜೆ ಮಾಡಿ ಹಾರೈಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯುವ ಈ ಹೈವೋಲ್ಟೇಜ್ ಪಂದ್ಯವು ಇಂದು ಭಾರತೀಯ ಕಾಲಮಾನ ರಾತ್ರಿ ೮ ಗಂಟೆಗೆ ಆರಂಭವಾಗಲಿದೆ.