ರಾಷ್ಟ್ರಕೂಟರು: (753-978)
ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದರು.
ತಮ್ಮನ್ನು ತಾವು ಲಟ್ಟಲೂರು ಪರಮೇಶ್ವರರು ಎಂದು ಕರೆದುಕೊಂಡಿದ್ದರು.
ರಾಜ ಲಾಂಛನ: ಗರುಡ
ರಾಜಧಾನಿ: ಮಾನ್ಯಕೇಟ
ಕನ್ನಡದ ಮೊದಲ ಉಪಲಬ್ಧ ಗ್ರಂಥ-ಕವಿರಾಜಮಾರ್ಗ(ಶ್ರೀವಿಜಯ). ಇದು ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾಯಿತು.(ಕಾವೇರಿಯಿಂದ ಗೋಧಾವರಿವರೆಗೆ ಕನ್ನಡ ನಾಡು ಹಬ್ಬಿತ್ತು.)
ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ
ಎಲ್ಲೋರಾದಲ್ಲಿ ಏಕಶಿಲಾ ಕೈಲಾಸನಾಥ ದೇವಾಲಯವನ್ನು ಕಟ್ಟಿಸಿದವನು: ಒಂದನೇ ಕೃಷ್ಣ
ಪಂಪ:
ಕನ್ನಡದ ಆದಿಕವಿ.
ವೇಮುಲವಾಡದ ಅರಿಕೇಸರಿ ಆಸ್ಥಾನದಲ್ಲಿದ್ದನು.
ಮಹಾ ಕಾವ್ಯಗಳು: ಆದಿ ಪುರಾಣ & ವಿಕ್ರಮಾರ್ಜುನ ವಿಜಯ(ಪಂಪ ಭಾರತ).
ಎಲ್ಲೋರದ ಕೈಲಾಸ ದೇವಾಲಯ-100 ಅಡಿಯ ಏಕಶಿಲೆಯದ್ದಾಗಿದೆ.(ನಿರ್ಮಾತೃ ಒಂದನೇ ಕೃಷ್ಣ)
ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವುದು-ಮೂರ್ತಿಶಿಲ್ಪ.
ಎಲ್ಲೋರಾ & ಎಲಿಫೆಂಟಾಗಲು ಮಹಾರಾಷ್ಟ್ರದಲ್ಲೇ ಇವೆ.
ಮುಂಬೈ ಬಂದರಿನ ಬಳಿ ಇರುವ ಒಂದು ದ್ವೀಪವೇ-ಎಲಿಫೆಂಟಾ. ಇಲ್ಲಿ ಮೂರು ಮುಖದ ಮಹೇಶ ಮೂರ್ತಿ ಇದೆ.
ಉತ್ತರ ಭಾರತದ ಮೇಲೆ ಮೊದಲ ಬಾರಿಗೆ ಯಶಸ್ವಿ ದಂಡಯಾತ್ರೆ ಕೈಗೊಂಡವನು-ಧ್ರುವ.
ಗಂಗರ ದೊರೆ ಎರಡನೇ ಶಿವಮಾರನನ್ನು ಮುದುಗುಂದೂರಲ್ಲಿ & ಕಂಚಿಯ ಪಲ್ಲವ ದೊರೆ ಎರಡನೇ ನಂದಿವರ್ಮನನ್ನು ಸೋಲಿಸಿ ಆನೆಗಳನ್ನು ಕಪ್ಪವಾಗಿ ಪಡೆದವನು-ಧ್ರುವ(ಧಾರಾವರ್ಷ/ಶ್ರೀವಲ್ಲಭ/ನರೇಂದ್ರ ದೇವ/ಕಲಿವಲ್ಲಭ)
ಮೂರನೇ ಗೋವಿಂದ(ಜಗತ್ತುಂಗ/ಪ್ರಭೂತವರ್ಷ/ಶ್ರೀವಲ್ಲಭ/ತ್ರಿಭುವನದವಳ):
ಗಂಗರು, ಪಾಂಡ್ಯರು & ಕೇರಳದ ಅರಸರನ್ನು ಸೋಲಿಸಿ ರಾಜ ಲಾಂಛನ ಕಿತ್ತುಕೊಂಡ
ಗೋವಿಂದನ ಯುದ್ಧದ ಮದ್ದಾನೆಗಳು ಗಂಗಾ ನದಿಯ ಪುಣ್ಯತೀರ್ಥದ ರುಚಿ ನೋಡಿದ್ದವು-ಅಮೋಘವರ್ಷ ನೃಪತುಂಗ.
ಒಂದನೇ ಅಮೋಘವರ್ಷ/ಅಮೋಘವರ್ಷ ನೃಪತುಂಗ/ಶರ್ವ:
ಚಿಕ್ಕಪ್ಪ ಕರ್ಕ ಆಡಳಿತ ನಡೆಸಿದ
ವೆಂಗಿ ಚಾಲುಕ್ಯರ ದೊರೆ ಮೂರನೇ ಗುಣಗ ವಿಜಯಾದಿತ್ಯನನ್ನು ವಿಂಗವಳ್ಳಿ ಎಂಬಲ್ಲಿ ಸೋಲಿಸಿದ.
ದಂಡನಾಯಕ ಬಂಕೇಶ(ಬನವಾಸಿಯ ರಾಜ್ಯಪಾಲ): ಗಂಗರ ಉತ್ತರ ಭಾಗವಾದ ತುಮಕೂರಿನ ಕೈದಾಳದ ಮೇಲೆ ಹಿಡಿತ ಸಾಧಿಸಿದ್ದ.
ಅಮೋಘವರ್ಷನು ಬಂಕೇಶನ ಹೆಸರಿನಲ್ಲಿ ನಿರ್ಮಿಸಿದ ನಗರ: ಬಂಕಾಪುರ
ನೀತಿಮಾರ್ಗ ಎರೆಗಂಗನು ಕೋಲಾರದ ರಾಜರಾಮುಡು ಕದನದಲ್ಲಿ ಅಮೋಘವರ್ಷನನ್ನು ಸೋಲಿಸಿದ.
ಅಮೋಘ ವರ್ಷನು ತನ್ನ ಮಗಳು ಚಂದ್ರಲಬ್ಬೆಯನ್ನು ಗಂಗದೊರೆ ಭೂತುಗನಿಗೆ ನೀಡಿ ಮದುವೆ ಮಾಡಿದ.
ಅಮೋಘವರ್ಷನು ಅಂಗ, ವಂಗ, ಮಗಧ, ಮಾಳ್ವ & ವೆಂಗಿ ಚಾಲುಕ್ಯರಿಂದ ಗೌರವಿಸಲ್ಪಡುತ್ತಿದ್ದನು ಎಂದು ತಿಳಿಸುವ ಶಾಸನಗಳು: ನೀಲಗುಂದ & ಶಿರೂರು ಶಾಸನಗಳು
ಅಮೋಘವರ್ಷನು ತನ್ನ ಜನರನ್ನು ಕ್ಷಾಮದಿಂದ ರಕ್ಷಿಸಬೇಕೆಂದು ಕೋರಿ ಕೊಲ್ಲಾಪುರ ಮಹಾಲಕ್ಷ್ಮಿಗೆ ತನ್ನ ಬೆರಳನ್ನು ಕತ್ತರಿಸಿ ಇಟ್ಟನು ಎಂದು ತಿಳಿಸುವ ಶಾಸನ: ಸಂಜಾನ್ ಶಾಸನ
ಅಮೋಘವರ್ಷನ ಕೃತಿ: ಪ್ರಶ್ನೋತ್ತರ ರತ್ನಮಾಲಾಶ್ರೀವಿಜಯ ಇವನ ಆಸ್ಥಾನದ ಕವಿ.
ಇವನ ಇಷ್ಟದ ಸಂಗತಿ-ಪ್ರಜೆಗಳ ಕ್ಷೇಮ.
ಮಾನ್ಯಖೇಟ ಪಟ್ಟಣ ಕಟ್ಟಿಸಿದ. (ಗುಲ್ಬರ್ಗದ ಇಂದಿನ ಮಳಖೇಡ.) ಇದೇ ರಾಷ್ಟ್ರಕೂಟರ ರಾಜಧಾನಿ.
ಅರಬ್ ಪ್ರವಾಸಿ ಸುಲೇಮಾನ್ ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿ “ನಾಲ್ಕು ಶ್ರೇಷ್ಠ ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವೂ ಒಂದಾಗಿದೆ” ಎಂದಿದ್ದ.
ಅಮೋಘವರ್ಷನಿಗಿದ್ದ ಬಿರುದುಗಳು: ಅತಿಶಯದವಳ, ನೃಪತುಂಗ, ವೀರನಾರಾಯಣ, ಶ್ರೀವಲ್ಲಭ, ರಟ್ಟಮಾರ್ತಾಂಡ
ಮೂರನೇ ಕೃಷ್ಣ:
ಪೊನ್ನ ಇವನ ಆಶ್ರಯದಲ್ಲಿದ್ದ ಕವಿ.
ಪೊನ್ನನ ಕೃತಿಗಳು: ಶಾಂತಿಪುರಾಣ & ಭುವನೈಕ್ಯ ರಾಮಾಭ್ಯುದಯ
ಉಭಯಕವಿ ಚಕ್ರವರ್ತಿ-ಪೊನ್ನ
ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಕವಿ: ಪಂಪ(ಕನ್ನಡದ ಆದಿ ಕವಿ)
ಪಂಪನ ಕೃತಿಗಳು: ವಿಕ್ರಮಾರ್ಜುನ ವಿಜಯ(ಪಂಪ ಭಾರತ) & ಆದಿಪುರಾಣಕನ್ನಡದ ಮೊದಲ ಗದ್ಯಕೃತಿ: ವಡ್ಡಾರಾಧನೆ(ಶಿವಕೋಟ್ಯಾಚಾರ್ಯ)
ಎಲ್ಲೋರಾದಲ್ಲಿ 34 ಗುಹಾಲಯಗಳಿದ್ದು, 5 ಹಿಂದೂ ಧರ್ಮಕ್ಕೆ ಸೇರಿವೆ.
ಎಲ್ಲೋರಾದ ಕೈಲಾಸನಾಥ ದೇವಾಲಯವನ್ನು ಒಂದನೇ ಕೃಷ್ಣನು 770ರಲ್ಲಿ ನಿರ್ಮಿಸಿದನು.
ಎಲ್ಲೋರದ ಕೈಲಾಸನಾಥ ದೇವಾಲಯವು ವಿಶ್ವದ ಅತ್ಯದ್ಭುತ ಕಲಾಕೃತಿಗಳಲ್ಲಿ ಒಂದು ಎಂದವನು-ವಿ.ಎ.ಸ್ಮಿತ್ಎಲಿಫೆಂಟಾ(ಗೊರವಪುರಿ)ದಲ್ಲಿ ಏಳು ಗುಹೆಗಳಿವೆ.
ರೋಣ-ಸೋಮೇಶ್ವರ ದೇವಾಲಯ
ಕುಕ್ಕನೂರು-ನವಲಿಂಗೇಶ್ವರ
ಸನ್ನತಿ-ಚಂದ್ರಲಾಂಬ ದೇವಾಲಯ
ಸಂಡೂರು-ಕುಮಾರಸ್ವಾಮಿ ದೇವಾಲಯ