ನವದೆಹಲಿ: ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಲೆಂದು ಹೇಳಿರುವ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡವೆಂದು ಡಿಕೆಶಿ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕೋಲಾಹಲವನ್ನೇ ಎಬ್ಬಿಸಿರುವ ಸ್ವಾಮೀಜಿ ಹೇಳಿಕೆ ಬಗ್ಗೆ ಖುದ್ದು ಡಿಕೆಶಿ ದಹೆಲಿಯಲ್ಲಿ ಪ್ರತಿಕ್ರಿಯಿಸಿ, ಸ್ವಾಮೀಜಿ ಉತ್ಸಾಹದಿಂದ ಹಾಗೆ ಹೇಳಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುವುದರಲ್ಲಿ ಅರ್ಥವಿಲ್ಲ. ರಾಜಕಾರಣದಲ್ಲಿ ಕೆಲ ಅಭಿಮಾನಿಗಳು ಹೀಗೆ ಕೂಡಿಕೊಂಡು ಮಾತನಾಡುತ್ತಿರುತ್ತಾರೆ. ಅಂಥವರ ಮಾತು ಸ್ವಾಮೀಜಿ ಹೇಳಿಕೆಗೆ ಕಾರಣವಾಯ್ತು ಅಷ್ಟೇ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷ ಏನೇ ತೀರ್ಮಾನ ಮಾಡಿದರೂ ಅದಕ್ಕೆಲ್ಲಾ ನಾವು ಬದ್ಧ ಎಂದಿದ್ದಾರೆ.
ಕೆಪಿಸಿಸಿ ಸ್ಥಾನವನ್ನು ಬಿಟ್ಟುಕೊಟ್ಟರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಕೆ.ಎನ್.ರಾಜಣ್ಣ ಅವರ ಮಾತಿಗೂ ಡಿಕೆಶಿ ಗರಂ ಆಗಿ, ಅವರ ಮಾತಿಗೆ ಉತ್ತರ ಕೊಡುತ್ತೇವೆ ಎಂದು ಮಾರ್ಮಿಕ ಎಚ್ಚರಿಕೆ ನೀಡಿದರು.