ಬೆಂಗಳೂರು: ಹಾಲಿನ ದರ ಏರಿಕೆ ವಿರುದ್ಧ ಧ್ವನಿ ಎತ್ತುತ್ತಿರುವ ಬಿಜೆಪಿಗರು ರೈತ ವಿರೋಧಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿ, ನನ್ನ ಪ್ರಕಾರ, ಹಾಲಿನ ದರ ಇನ್ನೂ ಜಾಸ್ತಿ ಆಗಲಿ, ಯಾರೇ ವಿರೋಧಿಸಿದರೂ ಯಾವುದೇ ತೊಂದರೆ ಆಗಲ್ಲ. ಹಾಲಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2 ರೂಪಾಯಿ ದರ ಅಷ್ಟೇ ಏರಿಕೆಯಾಗಿದ್ದು ಅದು ರೈತರಿಗೆ ತಲುಪುತ್ತದೆ. ರೈತರು ಸಂಕಷ್ಟದಲ್ಲಿದ್ದಾರೆ. ತಮ್ಮ ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕೆಎಂಫ್ ಅಂದರೆ ರೈತರ ಒಕ್ಕೂಟ. ಅಲ್ಲಿಗೆ ಸಲ್ಲುವ ಹಾಲಿನ ಹಣ ರೈತರಿಗೆ ಸೇರುತ್ತದೆ. ಕೆಎಂಎಫ್ ಉಳಿಯಬೇಕು, ರೈತರೂ ಉಳಿಯಬೇಕು ಎಂದಿದ್ದಾರೆ.
ಇನ್ನು ಲೋಕಸಭೆಯ ವಿಪಕ್ಷ ನಾಯಕರಾಗಿ ಸಂಸದ ರಾಹುಲ್ ಗಾಂಧಿ ಅವರು ಆಯ್ಕೆ ಆಗಿದ್ದಕ್ಕೆ ಶುಭ ಹಾರೈಸಿದ ಡಿಕೆಶಿ, ರಾಹುಲ್ ಗಾಂಧಿಯನ್ನು ವಿರೋಧ ಪಕ್ಷದ ನಾಯಕರಾಗಲು ವಿಶ್ವಾಸವಿಟ್ಟು ಒತ್ತಾಯಿಸಿದಕ್ಕೆ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳ ನಾಯಕರು ಹಾಗೂ ನಮ್ಮ ಪಕ್ಷದ ಹಿರಿಯರಿಗೆ ಧನ್ಯವಾದ ಎಂದಿದ್ದಾರೆ.