ಪಲ್ಲವರ ಹಲವು ಕದನಗಳಲ್ಲಿ ಇಮ್ಮಡಿ ಪುಲಿಕೇಶಿಗೆ ಸೋಲು!

ರಾಜಧಾನಿ-ವಾತಾಪಿ
ರಾಜ ಲಾಂಛನ: ವರಾಹ
ಮೂಲಪುರುಷ: ಜಯಸಿಂಹ
ಬಾದಾಮಿ ಕೋಟೆ ಕಟ್ಟಿಸಿದವನು-ಒಂದನೇ ಪುಲಿಕೇಶಿ; ಇವನು ಅಶ್ವಮೇಧಯಾಗ ಮಾಡಿದನೆಂದು ತಿಳಿಸಿದುದು-ಬಾದಾಮಿ ಶಾಸನ
ಇಮ್ಮಡಿ ಪುಲಿಕೇಶಿಯು 609ರಲ್ಲಿ ತನ್ನ ಚಿಕ್ಕಪ್ಪ ಮಂಗಳೇಶನನ್ನು ಏಳಪಟ್ಟುಸಿಂಬಿಗೆ ಯುದ್ಧದಲ್ಲಿ ಕೊಂದು ಅಧಿಕಾರಕ್ಕೆ ಬಂದನು.
ಇಮ್ಮಡಿ ಪುಲಿಕೇಶಿಯು ತನ್ನ ಚಿಕ್ಕಪ್ಪನೊಂದಿಗೆ ಅಂತಃಕಲಹದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ರಾಷ್ಟ್ರಕೂಟ ನಾಯಕರು: ಅಪ್ಪಾಯಿಕ & ಗೋವಿಂದ. ಇವರನ್ನು ಪುಲಿಕೇಶಿಯು ಭೀಮಾನದಿ ತೀರದಲ್ಲಿ ಸೋಲಿಸಿದ. ಅಪ್ಪಾಯಿಕ ಓಡಿ ಹೋದರೆ, ಗೋವಿಂದ ಶರಣಾದ.

ಅಳುಪರ ಸಾಮ್ರಾಜ್ಯ-ದಕ್ಷಿಣ ಕನ್ನಡ
ಪುಲಿಕೇಶಿಯು ಉತ್ತರದಲ್ಲಿ ಲಾಟ, ಮಾಳ್ವ, ಗೂರ್ಜರ ದೊರೆಗಳನ್ನು ಸೋಲಿಸಿದ & ಗುಜರಾತ್ ಶಾಖೆಗೆ ಸಹೋದರ ಜಯಸಿಂಹನನ್ನು ಅಧಿಕಾರಿಯನ್ನಾಗಿ ಮಾಡಿದ.
ವೆಂಗಿ ಚಾಲುಕ್ಯ ಸಂಸ್ಥಾನ ಗೆದ್ದುಕೊಂಡು ಸಹೋದರ ಕುಬ್ಜ ವಿಷ್ಣುವರ್ಧನನನ್ನು ನೇಮಿಸಿದ.
ಪಲ್ಲವರ ಒಂದನೇ ಮಹೇಂದ್ರ ವರ್ಮನನ್ನು ಪೊಲ್ಲಿಲೂರು ಎಂಬಲ್ಲಿ ಸೋಲಿಸಿದ.
ಒಂದನೇ ನರಸಿಂಹ ವರ್ಮನಿಂದ ಪುಲಿಕೇಶಿ ಸೋತ ಯುದ್ಧಗಳು: ಪೆರಿಯಾಲ, ಮಣಿಮಂಗಲ & ಸುರಮಾರ ಕದನಗಳು
ಒಂದನೇ ನರಸಿಂಹ ವರ್ಮ(ವಾತಾಪಿಕೊಂಡನ್): ಬಾದಾಮಿ ವಶಪಡಿಸಿಕೊಂಡ
ಇಮ್ಮಡಿ ಪುಲಿಕೇಶಿಯನ್ನು ಅತ್ಯಂತ ಪರಾಕ್ರಮಿ ಸಾಮ್ರಾಟ ಎಂದು ಕರೆದವನು-ಹ್ಯೂಯನ್ ತ್ಸಾಂಗ್
ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡವರು- ಪರ್ಷಿಯಾದ ಇಮ್ಮಡಿ ಖುಸ್ರು & ಇಮ್ಮಡಿ ಪುಲಿಕೇಶಿ
ಇಮ್ಮಡಿ ಪುಲಿಕೇಶಿ: ಸತ್ಯಾಶ್ರಯ, ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವಿವಲ್ಲಭ
ಕೃಷ್ಣ ತುಂಗಭದ್ರಾ ದೋ-ಅಬ್ ಪ್ರದೇಶಗಳ ಮೇಲೆ ಹಕ್ಕು ಸಾಧಿಸಲು ಸಂಘರ್ಷಕ್ಕಿಳಿದವರು-ಪಲ್ಲವರು & ಚಾಲುಕ್ಯರು

ಬಾದಾಮಿ ಚಾಲುಕ್ಯರ ಸಂಸ್ಥಾನವು 12 ವರ್ಷಗಳ ಕಾಲ ಪಲ್ಲವರ ಹಿಡಿತಕ್ಕೆ ಒಳಪಟ್ಟಿತ್ತು.
ಕಂಚಿ ಮೇಲೆ 3 ಬಾರಿ ದಾಳಿ ಮಾಡಿದವನು-ಇಮ್ಮಡಿ ವಿಕ್ರಮಾದಿತ್ಯ. ಎರಡನೇ ಪರಮೇಶ್ವರ ವರ್ಮನ್ ನನ್ನು ವಿಳಂದ ಎಂಬಲ್ಲಿ ಸೋಲಿಸಿದ; ನಂದಿ ವರ್ಮನ್ ಸೋಲಿಸಿ ಕಂಚಿ ವಶಪಡಿಸಿಕೊಂಡ. ಕಂಚಿಯ ರಾಜಸಿಂಹ ದೇವಾಲಯಕ್ಕೆ ದಾನ ನೀಡಿದ.
ಒಂದನೇ ಕೀರ್ತಿ ವರ್ಮನ ಸಾಧನೆ ವಿವರಿಸುವ ಶಾಸನ: ಮಹಾಕೂಟ ಸ್ತಂಭ ಶಾಸನ
ಇಮ್ಮಡಿ ಪುಲಿಕೇಶಿಯ ಸೊಸೆ-ವಿಜಯಮಹಾದೇವಿ/ವಿಜಯಭಟ್ಟಾರಿಕಾ/ವಿಜ್ಜಿಕಾ: ಕೌಮುದಿ ಮಹೋತ್ಸವ
ಐಹೊಳೆ ಶಾಸನ/ಐಹೊಳೆ ಪ್ರಶಸ್ತಿ ರಚಿಸಿದವನು-ರವಿಕೀರ್ತಿ(ಮೇಗುತಿ ಜೈನ ದೇವಾಲಯ ಕಟ್ಟಿಸಿದ)
ಚಾಲುಕ್ಯರು ಕೆಂಪು ಮರಗಲ್ಲು ಬಳಸಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು.

ಚಾಲುಕ್ಯರ ವಾಸ್ತುಶಿಲ್ಪವನ್ನು ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು ಎಂದವನು: ಪಾರ್ಸಿ ಬ್ರೌನ್
ಬಾದಾಮಿಯ ನಾಲ್ಕರ ಪೈಕಿ ಮೂರನೇ ಗುಹಾಂತರ ದೇವಾಲಯವನ್ನು ಕೆತ್ತಿಸಿದವನು-ಮಂಗಳೇಶ.
ಬಾದಾಮಿ ಚಾಲುಕ್ಯರ ಕಳೆಯಕಲೆಯ ಆರಂಭಿಕ ದೇವಾಲಯ: ಲಾಡ್ ಖಾನ್
ಲಾಡ್ ಖಾನ್ ದೇವಾಲಯದ ಗರ್ಭಗೃಹದ ಮೇಲೆ ಗರುಡ ಇರುವುದನ್ನು ಕಂಡು ಇದು ವೈಷ್ಣವ ದೇವಾಲಯ ಎಂದವನು: ಹೆನ್ರಿ ಕಸಿನ್ಸ್

ಪಟ್ಟದಕಲ್ಲಿನ ಪ್ರಾಚೀನ ಹೆಸರು: ಕಿಸುವೊಳಲು
ಎರಡನೇ ವಿಕ್ರಮಾದಿತ್ಯನು ಪಲ್ಲವರ ಮೇಲೆ 3 ಬಾರಿ ದಾಳಿ ಮಾಡಿ ಕಂಚಿಯನ್ನು ಗೆದ್ದ ನೆನಪಿಗಾಗಿ ಆತನ ಪತ್ನಿ ಲೋಕಮಹಾದೇವಿಯು ಪಟ್ಟದಕಲ್ಲಿನಲ್ಲಿ ಕಟ್ಟಿಸಿದ ದೇಗುಲ: ವಿರೂಪಾಕ್ಷ/ಲೀಕೇಶ್ವರ ದೇವಾಲಯ(ಶಿಲ್ಪಿ-ಅನಿರ್ವಾತಾಚಾರಿ ಗುಂಡ)
ಪಲ್ಲವರು:
ದೇವಾಲಯಗಳ ನಗರ ಕಂಚಿ
ಅಧಿ ದೇವತೆ: ಕಾಮಾಕ್ಷಿ
ಪಾರ್ಲಾ ನದಿ ಸಮೀಪದಲ್ಲಿರುವುದು ಕಂಚಿ

Leave a Reply

Your email address will not be published. Required fields are marked *