ಕೋಲಾರ: ಅತಿಯಾಗಿ ಸಾಲ ಮಾಡಿದ್ದ ಹಾಗೂ ಇನ್ನಿತರೆ ವಿಚಾರಗಳಿಗೆ ಜಗಳವಾಡಿಕೊಂಡು ಪತಿ-ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕನಕನಪಾಳ್ಯದಲ್ಲಿ ನಡೆದಿದೆ.
ಮೃತರನ್ನು ಸಂತೋಷ್ ಮತ್ತು ಭಾವನಾ ಎಂದು ಗುರುತಿಸಲಾಗಿದೆ. ಸಾಲದ ವಿಚಾರಕ್ಕೆ ದಂಪತಿ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ಕ-ಪಕ್ಕದವರಿಂದ ಹೆಚ್ಚಿನ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತಿದ್ದಾರೆ.