ಬೆಂಗಳೂರು: ಕನ್ನಡ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಟ್ವೀಟ್ ಮಾಡಿ ಅವರ ಜನ್ಮದಿನವನ್ನು ಸ್ಮರಿಸಿಕೊಂಡಿದ್ದಾರೆ.
‘ವೃತ್ತಿಯಲ್ಲಿ ವಕೀಲರಾದರೂ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕಾಳಜಿ ವಹಿಸಿ, ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಶರಣರ ತತ್ವಾದರ್ಶಗಳನ್ನು, ಅವರೊಳಗಿನ ವಿಶ್ವಮಾನವ ಪ್ರಜ್ಞೆಯನ್ನು ಬೆಳಕಿಗೆ ತಂದ ಡಾ|| ಫ.ಗು ಹಳಗಟ್ಟಿ ಅವರಿಗೆ ಅವರ ಜನ್ಮದಿನದಂದು ನನ್ನ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.
1880ರಲ್ಲಿ ಧಾರವಾಡದಲ್ಲಿ ಜನಿಸಿದ್ದ ಹಳಕಟ್ಟಿ, 1964ರ ಜೂ.29ರಂದು ಅಸುನೀಗಿದ್ದರು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಳಕಟ್ಟಿ ವಹಿಸಿದ್ದರು. ಶಿವಾನುಭವ ಮತ್ತು ನವ ಕರ್ನಾಟಕ ಇವರು ಬರೆದ ಖ್ಯಾತ ಕಾದಂಬರಿಗಳಾಗಿವೆ.