ವೇಟ್ ಲಿಫ್ಟರ್ ಖುದ್ಸಿಯಾ ಅಭಿನಂದಿಸಿದ ಸಿಎಂ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದ ಐರನ್ ಲೇಡಿ ಆಫ್​​ ಇಂಡಿಯಾ ಖ್ಯಾತಿಯ ಖುದ್ಸಿಯಾ ನಜೀರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಭವನದಲ್ಲಿ ಅಭಿನಂದಿಸಿದ್ದಾರೆ.

ಈ ವೇಳೆ, ತಮ್ಮನ್ನು ಭೇಟಿಯಾದ ಖುದ್ಸಿಯಾಗೆ ಇನ್ನೂ ಹೆಚ್ಚಿನ ಸಾಧನೆ ತೋರುವಂತೆ ಮುಖ್ಯಮಂತ್ರಿಗಳು ಹುರುದುಂಬಿಸಿದರು.

ಜೂ.19ರಿಂದ 23ರವರೆಗೆ ನಡೆದ ಈ ಚಾಂಪಿಯನ್ ಶಿಪ್​​ನಲ್ಲಿ ಖುದ್ಸಿಯಾ ಅವರು ಚಿನ್ನದ ಪದಕ ಗೆದ್ದಿದ್ದರು. ಇವರು ಮೂಲತಃ ಕನ್ನಡಿಗರೇ ಆಗಿದ್ದು, ಬಂಗಾರಪೇಟೆಯವರಾಗಿದ್ದಾರೆ. ಅಷ್ಟೇ ಅಲ್ಲ, ಇವರು ಬೆಂಗಳೂರಿನ ಕೆಎಸ್​​​​​​​​​​ಆರ್​​​​​​​ಟಿಸಿಯ ಪ್ರಧಾನ ಕಚೇರಿಯ ನೌಕರರೂ ಆಗಿರುವುದು ವಿಶೇಷ.

Leave a Reply

Your email address will not be published. Required fields are marked *