ಮಕ್ಕಳೇ.. ಪೋಷಕರನ್ನು ನಿರ್ಲಕ್ಷಿಸೀರಿ ಎಚ್ಚರ!

ಪೋಷಕರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ, 2007ರ ಅಡಿಯಲ್ಲಿ ಹಿರಿಯ ನಾಗರಿಕರಾದ ಪೋಷಕರನ್ನು ಪೋಷಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ಕಾನೂನುಬದ್ಧವಾಗಿ ವಹಿಸಿಕೊಡಲಾಗಿದೆ.

ಕಾಯ್ದೆಯ ಮುಖ್ಯ ಉದ್ದೇಶಗಳು:

  1. ಹಿರಿಯ ನಾಗರಿಕರು ಮತ್ತು ಪೋಷಕರಿಗೆ ಪಾಲನೆಯ ಹಕ್ಕು ಒದಗಿಸುವುದು.
  2. ಮಕ್ಕಳಿಂದ ಅಥವಾ ವಂಶಸ್ಥರಿಂದ ಆರ್ಥಿಕ ಸಹಾಯ ಪಡೆಯಲು ಅಥವಾ ಪೋಷಿಸಿಕೊಳ್ಳಲು ಅವಕಾಶ ನೀಡುವುದು.
  3. ಮಕ್ಕಳು ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದರೆ, ಮಕ್ಕಳಿಗೆ ತಾವು ನೀಡಿದ ಆಸ್ತಿ ಅಥವಾ ಉಡುಗೊರೆಗಳನ್ನು ರದ್ದುಗೊಳಿಸಲು ಹಿರಿಯರಿಗೆ ಹಕ್ಕನ್ನು ನೀಡುವುದು.
  4. ಕಾಯ್ದೆ ಅಡಿಯಲ್ಲಿ ಪೋಷಕರನ್ನು ಕನಿಷ್ಠ ವೃದ್ಧಾಶ್ರಮಕ್ಕೆ ಸೇರಿಸಬೇಕು ಅಥವಾ ಸಮಾನವಾದ ಸೇವೆ ಒದಗಿಸಬೇಕು.

Key provisions: 

>ಪೋಷಕರನ್ನು ಪೋಷಿಸುವುದು ಬಯಾಲಾಜಿಕಲ್ ಅಲ್ಲದ ಮಕ್ಕಳಿಗೂ ಅನ್ವಯವಾಗುತ್ತದೆ.

>ಪೋಷಕರು ಪಾಲನೆ ಕೋರಿ ಮಕ್ಕಳ ವಿರುದ್ಧ ಅರ್ಜಿ ಹಾಕಬಹುದು.

>ಜಿಲ್ಲಾಡಳಿತದ ಮಟ್ಟದಲ್ಲಿರುವ ಸ್ಪೀಡ್ ಟ್ರಿಬ್ಯೂನಲ್ ಗಳು ಈ ಅರ್ಜಿಗಳನ್ನು ಅರ್ಜಿ ಸಲ್ಲಿಸಿದ ೯೦ ದಿನಗಳ ಒಳಗೆ ತೀರ್ಮಾನ ಮಾಡಬೇಕು.

>ಕಾಯ್ದೆಯಡಿ ಪೋಷಕರು ತಮ್ಮ ಮಕ್ಕಳಿಗೆ ನೀಡಿರುವ ಆಸ್ತಿಯನ್ನು ರದ್ದು ಮಾಡಿಸಿಕೊಳ್ಳಬಹುದು.

>ಕಾಯ್ದೆ ಅಡಿಯಲ್ಲಿ ಪ್ರತೀ ಜಿಲ್ಲೆಯಲ್ಲೂ ವೃದ್ಧಾಶ್ರಮ ಸ್ಥಾಪಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೂ ನೀಡಲಾಗಿದೆ. 

ದಂಡನಾತ್ಮಕ ಕ್ರಮಗಳು (Penalties):

  • ಪಾಲನೆ ಮಾಡದೆ ನಿರ್ಲಕ್ಷಿಸಿದರೆ ₹5,000 ದಂಡ ಅಥವಾ 3 ತಿಂಗಳು ಜೈಲುಶಿಕ್ಷೆ ಅಥವಾ ಇವೆರಡೂ ಆಗಬಹುದು.

ಪೋಷಕರ ಹಕ್ಕುಗಳನ್ನು ಬಲಪಡಿಸಲು ಮತ್ತು ಮಕ್ಕಳಿಗೆ ಪಾಲನೆಯ ಹೊಣೆಗಾರಿಕೆಯನ್ನು ಒದಗಿಸಲು ಈ ಕಾಯ್ದೆಯನ್ನು ರೂಪಿಸಲಾಗಿದೆ. ಇದು ಪೋಷಕರು ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಹಿಂಪಡೆಯುವ ಕಾನೂನುಬದ್ಧವಾದ ಮಾರ್ಗವನ್ನೂ ಒದಗಿಸುತ್ತದೆ.

Leave a Reply

Your email address will not be published. Required fields are marked *