ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಯಾಕೋ ಟೈಂ ಸರಿ ಇಲ್ಲದಂತೆ ಕಾಣಿಸುತ್ತಿದ್ದು, ಸಿಎಂ ಬದಲಾವಣೆ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡ ಇರಬಹುದೆಂದು ಸಚಿವ ಚಲುವರಾಯ ಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸಿಎಂ ಸ್ಥಾನವನ್ನು ವೀರಶೈವ ಲಿಂಗಾಯತ ನಾಯಕರಿಗೆ ಬಿಟ್ಟು ಕೊಡಬೇಕು ಎಂಬ ಕೂಗು ಎದ್ದಿರುವ ಬಗ್ಗೆ ಮಾತನಾಡಿ, ಸಿಎಂ ಬದಲಾವಣೆ ಬಗ್ಗೆ ನಿನ್ನೆ ಒಕ್ಕಲಿಗರ ಸ್ವಾಮೀಜಿ ಆಗ್ರಹಿಸಿದ್ದರು. ಇದೀಗ ವೀರಶೈವ ಲಿಂಗಾಯತರನ್ನು ಸಿಎಂ ಮಾಡಬೇಕೆಂದು ಆ ಸಮುದಾಯದ ಶ್ರೀಗಳು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯ ವಾತಾವರಣದಲ್ಲಿ ಯಾಕೋ ಟೈಂ ಸರಿಯಿಲ್ಲ ಅನಿಸುತ್ತಿದೆ.
ಇದರ ಹಿಂದೆ ಬಿಜೆಪಿಯವರ ಪ್ರಚೋದನೆ, ಕೈವಾಡ ಇದ್ದಂತೆ ತೋರುತ್ತಿದೆ. ಒಟ್ಟಾರೆಯಾಗಿ ನಮ್ಮ ಹೈಕಮಾಂಡ್ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಸದ್ಯದಲ್ಲೇ ಸರಿಪಡಿಸುತ್ತದೆ ಎಂಬ ನಂಬಿಕೆ ಇದೆ. ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಹೀಗೆ ಎಲ್ಲವೂ ಹೈಕಮಾಂಡ್ ಕೈಯಲ್ಲಿದೆ ಎಂದರು.