ಕ್ಯಾಬಿನೆಟ್ ನಿಯೋಗ: 1946
ಲಾರ್ಡ್ ಫೆಥಿಕ್ ಲಾರೆನ್ಸ್-ಭಾರತ ವ್ಯವಹಾರಗಳ ಕಾರ್ಯದರ್ಶಿ.
ಸರ್ ಸ್ಟ್ಯಾಫೊರ್ಡ್ ಕ್ರಿಪ್ಸ್-ವಾಣಿಜ್ಯ ಮಂಡಳಿಯ ಅಧ್ಯಕ್ಷರು.
ಎ.ವಿ.ಅಲೆಕ್ಸಾಂಡರ್-ನೌಕಾಪಡೆಯ ಮುಖ್ಯಸ್ಥ.1930 ಜ.26-ಲಾಹೋರ್ ಅಧಿವೇಶನ-ಪೂರ್ಣ ಸ್ವರಾಜ್ಯ ಘೋಷಣೆ ಅಂಗೀಕರಿಸಲಾಯಿತು.
ಸಂವಿಧಾನ ಜಾರಿಗೆ ಬಂದ ದಿನ-1950ರ ಜ.26.
1895ರ ಕಾಂಗ್ರೆಸ್ ಅಧಿವೇಶನ-ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹ. ತಿಲಕ್ ಅವರು ಸ್ವರಾಜ್ಯ ಬಿಲ್ ನಲ್ಲಿ ಹಕ್ಕುಗಳಿಗಾಗಿ ಒತ್ತಾಯಿಸಿದರು.
1925ರ ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್ ನಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ & ಕಾನೂನಿನ ಮುಂದೆ ಸಮಾನರು ಎಂದು ಪ್ರತಿಪಾದಿಸಿದವರು-ಆನಿಬೆಸೆಂಟ್.ರಾಷ್ಟ್ರಪತಿಗಳ ವಿರುದ್ಧ ಯಾವುದೇ ಸದನ(ರಾಜ್ಯಸಭೆ ಅಥವಾ ಲೋಕಸಭೆ)ದಲ್ಲಿಯೂ ಮಹಾಭಿಯೋಗ ಮಂಡಿಸಬಹುದು.
ಗೊತ್ತುವಳಿ ಮಂಡಿಸಿದ ತರುವಾಯ 1/4ರಷ್ಟು ಸದಸ್ಯರ ಬೆಂಬಲದೊಂದಿಗೆ 14 ದಿನಗಳಿಗೂ ಮುನ್ನವೇ ರಾಷ್ಟ್ರಪತಿಗಳಿಗೆ ನೋಟಿಸ್ ನೀಡಬೇಕು. ಸದನದಲ್ಲಿ 2/3ರಷ್ಟು ಮತ ಸ್ವೀಕೃತವಾದರೆ ರಾಷ್ಟ್ರಪತಿಗಳು ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಇದುವರೆಗೂ ಯಾವುದೇ ರಾಷ್ಟ್ರಪತಿ ವಿರುದ್ಧ ಮಹಾಭಿಯೋಗ ಮಂಡಿಸಿಲ್ಲ.
ವಿಧಿ 352: ರಾಷ್ಟ್ರೀಯ ತುರ್ತು ಪರಿಸ್ಥಿತಿ
ಘೋಷಿಸಿದ 1 ತಿಂಗಳೊಳಗೆ ಉಭಯ ಸದನಗಳ ಒಪ್ಪಿಗೆ ಪಡೆದರೆ 6 ತಿಂಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿರಲಿದೆ. ಪ್ರತೀ 6 ತಿಂಗಳಿಗೊಮ್ಮೆ ಅನುಮತಿ ಪಡೆಯುತ್ತಾ ಅನಿರ್ದಿಷ್ಟಾವಧಿವರೆಗೆ ತುರ್ತು ಪರಿಸ್ಥಿತಿ ಘೋಷಿಸಬಹುದು.
ಹೇರಲಾದ ವರ್ಷಗಳು: 1962, 1971 & 1975ವಿಧಿ 356: ರಾಜ್ಯ ತುರ್ತು ಪರಿಸ್ಥಿತಿ
ರಾಜ್ಯಪಾಲರ ಶಿಫಾರಸಿನ ಮೇರೆಗೆ ಅಥವಾ ಖುದ್ದಾಗಿ ರಾಷ್ಟ್ರಪತಿಗಳು ಘೋಷಿಸುತ್ತಾರೆ.
ತುರ್ತು ಪರಿಸ್ಥಿತಿ ಘೋಷಿಸಿದ 2 ತಿಂಗಳ ಒಳಗೆ ಲೋಕಸಭೆ & ರಾಜ್ಯಸಭೆಗಳಲ್ಲಿ ಅನುಮತಿ ಪಡೆದುಕೊಂಡರೆ- ಗರಿಷ್ಠ 3 ವರ್ಷಗಳವರೆಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಬಹುದು.
ವಿಧಿ-360: ಹಣಕಾಸು ತುರ್ತು ಪರಿಸ್ಥಿತಿ:
ಇದನ್ನು ಇದುವರೆಗೂ ಘೋಷಿಸಿಲ್ಲ.
ಅವಿಶ್ವಾಸ ಗೊತ್ತುವಳಿ(Article-75):
ಪ್ರಧಾನಿ ಅಥವಾ ಸಿಎಂ ನೇತೃತ್ವದ ಮಂತ್ರಿ ಮಂಡಲದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಲೋಕಸಭಾ ಅಥವಾ ವಿಧಾನಸಭಾ ಸದಸ್ಯರು ಸದನದಲ್ಲಿ ಮಂಡಿಸುವ ಗೊತ್ತುವಳಿಯೇ ಅವಿಶ್ವಾಸ ಗೊತ್ತುವಳಿ.
ಇದು ರಾಜ್ಯಸಭಾ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಅನ್ವಯವಾಗುವುದಿಲ್ಲ.ಭಾರತದ ಇತಿಹಾಸದಲ್ಲಿ ಇದುವರೆಗೂ ಸುಮಾರು 34 ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗಿದೆ
>ವಿಧಿ 171- ಯಾವುದೇ ರಾಜ್ಯ ದ್ವಿಸದನ ವ್ಯವಸ್ಥೆ ಹೊಂದಬಹುದು.
>ವಿಧಾನ ಪರಿಷತ್ ಇರುವ ರಾಜ್ಯಗಳು: ಆಂಧ್ರ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ & ಉತ್ತರ ಪ್ರದೇಶ.>ವಿಧಾನ ಪರಿಷತ್ತಿನ ಸದಸ್ಯರ(MLC) ಸಂಖ್ಯೆಯು ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ 1/3ಕ್ಕಿಂತ ಹೆಚ್ಚಿರಬಾರದು.