ಬೈಕ್ ಟ್ಯಾಕ್ಸಿ ಚಾಲಕರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಿಎಂಗೆ ಬಹಿರಂಗ ಪತ್ರ

ಕರ್ನಾಟಕದಾದ್ಯಂತ ಇರುವ ಸಾವಿರಾರು ಬೈಕ್ ಟ್ಯಾಕ್ಸಿ ಚಾಲಕರು ನಿನ್ನೆ ದಿಢೀರ್ ಎಂದು ಪ್ರತಿಭಟನೆ ನಡೆಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವಂತಿಲ್ಲವೆಂದು ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಮಾಡಲಾಗಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಗಳು ಬೆಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ ಮತ್ತು ರಾಮನಗರ ಸೇರಿದಂತೆ ಹಲವೆಡೆ ನಡೆದಿದ್ದು, ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘಟನೆ (Bike Taxi Welfare Association) ಇದನ್ನು “ಬದುಕುಳಿಯಲು ಅಂತಿಮ ವಿನಂತಿ” ಎಂದು ವರ್ಣಿಸಿದೆ.

ಕಳೆದ ಹಲವು ವರ್ಷಗಳಿಂದ ಬೈಕ್ ಟ್ಯಾಕ್ಸಿಗಳು ಚಾಲಕರಿಗೂ, ಪ್ರಯಾಣಿಕರಿಬ್ಬರಿಗೂ ಜೀವನಾಡಿಯಂತಿವೆ. ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ, ಇವು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತವೆ ಹಾಗೂ ಜನರನ್ನು ವೇಗವಾಗಿ ಅವರು ತಲುಪಬೇಕಿರುವ ಸ್ಥಳಗಳಿಗೆ ತಲುಪಿಸುತ್ತವೆ. ಚಿಕ್ಕ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಇವು ಇತರೆ ಉದ್ಯೋಗಗಳಿಗೆ ಪ್ರವೇಶವಿಲ್ಲದ ಯುವಕರಿಗೆ ಆದಾಯದ ಏಕೈಕ ಮೂಲವಾಗಿವೆ” ಎಂದು ಸಂಘಟನೆ ಸಮರ್ಥಿಸಿಕೊಂಡಿದೆ. 

ಈ ನಿಷೇಧವು ನಮ್ಮ ಜೀವನೋಪಾಯಕ್ಕೆ ನೇರ ಬೆದರಿಕೆಯಾಗಿದೆ. ಈ ಪ್ರತಿಭಟನೆಯು ಜೂನ್ 13ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲೂ ಆಗಿದೆ ಎಂದು ಸಂಸ್ಘಟನೆ ಹೇಳಿದೆ. ಅಂದಿನ ತೀರ್ಪಿನಲ್ಲಿ ಹೈಕೋರ್ಟ್, ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರ ಹೊರಡಿಸಿದ್ದ ಹಿಂದಿನ ಆದೇಶವನ್ನು ಸ್ಥಗಿತಗೊಳಿಸಲು ನಿರಾಕರಿಸಿತು. 

ಏಪ್ರಿಲ್ 2ರಂದು ಹೊರಡಿಸಲಾದ ಆ ತೀರ್ಪಿನ ಪ್ರಕಾರ, ಚಾಲಕರು ಮತ್ತು ಸೇವಾ ಪ್ರದಾತರಿಗೆ ಸೇವೆಗಳನ್ನು ನಿಲ್ಲಿಸಲು ಪ್ರಾರಂಭದಲ್ಲಿ ಆರು ವಾರಗಳ ಕಾಲಾವಕಾಶ ನೀಡಲಾಗಿತ್ತು, ನಂತರ ಆ ಅವಧಿಯನ್ನು ಜೂನ್ 15ರವರೆಗೆ ಸ್ವಲ್ಪ ಮಟ್ಟಿಗೆ ವಿಸ್ತರಿಸಲಾಗಿತ್ತು.

ಪ್ರತಿಭಟನೆಯ ಭಾಗವಾಗಿ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಪತ್ರಗಳನ್ನು ಕಳುಹಿಸಿ, ತಕ್ಷಣವೇ ನೀತಿ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *