ಅಮೆರಿಕಾ: ಅಧ್ಯಕ್ಷ ಸ್ಥಾನಕ್ಕೆ ಈ ವರ್ಷ ಚುನಾವಣೆ ನಡೆಯಲಿದೆ. ಇದರ ಭಾಗವಾಗಿ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ಅಭ್ಯರ್ಥಿಗಳ ನಡುವೆ ಬಹಿರಂಗ ಚರ್ಚೆಗಳು ನಡೆಯುತ್ತಿವೆ.
ಮೊದಲ ಹಂತದ ಚರ್ಚೆ ಈಗಾಗಲೇ ಆರಂಭವಾಗಿದ್ದು, ಉಭಯ ಅಭ್ಯರ್ಥಿಗಳೂ ಕೂಡ ಪರಸ್ಪರವಾಗಿ ಆರೋಪ, ಪ್ರತ್ಯಾರೋಪಗಳನು ಮಾಡಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ‘ನಿನ್ನ ಪತ್ನಿ ಗರ್ಭಿಣಿ ಆಗಿದ್ದಾಗ ಪೋರ್ನ್ ಸ್ಟಾರ್ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದೀಯಾ ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಟ್ರಂಪ್, ನಾನು ಪೋರ್ನ್ ಸ್ಟಾರ್ ಜತೆ ಲೈಂಗಿಕ ಸಂಪರ್ಕ ಹೊಂದಿಲ್ಲ. ಅಲ್ಲದೆ ನನ್ನ ವಿರುದ್ಧ ಹಲವು ದೂರುಗಳು ದಾಖಲಾಗಲು ನೀವೇ ಕಾರಣರಾಗಿದ್ದೀರಿ. ಎಲ್ಲಾ ಷಡ್ಯಂತ್ರದ ಹಿಂದೆಯೂ ನೀವೇ ಇದ್ದೀರೆಂದು ಕಿಡಿಕಾರಿದ್ದಾರೆ.