>ರಾಜ್ಯದ ದಕ್ಷಿಣ ಗಡಿ-ಕೃಷ್ಣಾ ನದಿ.
>ರಾಜಧಾನಿ- ಕಲಬುರಗಿ & ಬೀದರ್.
>ಸಾಮ್ರಾಜ್ಯದ ಸ್ಥಾಪಕ-ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನ್ ಷಾ. ಮಹಮ್ಮದ್ ಬಿನ್ ತುಘಲಕ್ ವಿರುದ್ಧ ಗೆದ್ದು ಸ್ವಾತಂತ್ರ್ಯ ಘೋಷಿಸಿಕೊಂಡ.
>ಪ್ರಸಿದ್ಧ ದೊರೆ-ತಾಜುದ್ದೀನ್ ಫಿರೋಜ್ ಷಾ.
ತಾಜುದ್ದೀನ್ ಫಿರೋಜ್ ಷಾ:
>ಕುರಾನಿನ ಪ್ರತಿ ತಯಾರಿಸಿ ಜೀವನಾಂಶ ಸಂಪಾದಿಸುತ್ತಿದ್ದ.
>ಜಯಾಮಿತಿ & ಧರ್ಮಶಾಸ್ತ್ರದಲ್ಲಿ ಹೊಂದಿದ್ದ.
>ಮಹಾರಾಷ್ಟ್ರದ ದೌಲತಾ ಬಾದ್ ನಲ್ಲಿ ಆಕಾಶ ವೀಕ್ಷಣಾಲಯ ಸ್ಥಾಪಿಸಿದ್ದ.
>ಭೀಮಾ ನದಿಯ ದಂಡೆ ಮೇಲೆ ಫಿರೋಜಾಬಾದ್ ನಗರ ನಿರ್ಮಿಸಿದ್ದ.
>ಇವನ ರಾಜ್ಯಕ್ಕೆ ಸೂಫಿಸಂತ ಬಂದೇನವಾಜ ಭೇಟಿ ನೀಡಿದ್ದ. ಇವನಿಗೆ ಹಲವು ಗ್ರಾಮ ಉಂಬಳಿ ನೀಡಿದ್ದ.
ಮಹಮ್ಮದ್ ಗವಾನ್(ಪರ್ಷಿಯಾ ಮೂಲದವನು):
>ಮೂರನೇ ಮಹಮ್ಮದ್ ಷಾನ ಮುಖ್ಯಮಂತ್ರಿ.
>ಕೃತಿಗಳು: ರಿಯಾಜ್-ಉಲ್-ಇನ್ಷಾ & ಮಂಜೀರ್-ಉಲ್-ಇನ್ಷಾ.
>ಕ್ಯಾಲಿಗ್ರಾಫಿ ಎಂದರೆ-ಕಲಾ ಲಿಪಿ.
>ವಿಜಯನಗರದ ಹುಬ್ಬಳ್ಳಿ, ಬೆಳಗಾವಿ ಗೆದ್ದನು.
>ಕಿರುಕುಳದ ತೆರಿಗೆ ರದ್ದು ಮಾಡಿದ.
>4 ಆಡಳಿತ ವಿಭಾಗಗಳನ್ನು 8ಕ್ಕೆ ಹೆಚ್ಚಿಸಿ ತರಫ್ ಎಂದು ಹೆಸರಿಟ್ಟ.
>ಅಂಚೆ ವ್ಯವಸ್ಥೆ ಚುರುಕುಗೊಳಿಸಿದ.
>ಬೀದರ್ ನಲ್ಲಿ ಮದರಸ(1472) ಸ್ಥಾಪಿಸಿದ.
>ಸ್ವಂತ ಗಳಿಕೆಯನ್ನು ಶಿಕ್ಷಣಕ್ಕಾಗಿ ನೀಡಿದ.
>ಇವನ ಸಮಾಧಿ ಮೇಲೆ ‘ಮುಗ್ಧ ಗವಾನನನ್ನು ಕೊಲೆ ಮಾಡಲಾಯಿತು’ ಎಂದು ಬರೆಯಲಾಗಿದೆ.
>ಇವನ ಕಾಲದ ಭಾಷೆ-ದಖನಿ ಉರ್ದು.
ಬಹಮನಿಗಳ ಮೊದಲ ರಚನೆ-ಕಲಬುರಗಿಯ ಜಾಮೀ ಮಸೀದಿ. (ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಸೀದಿ, ಅಲಿ ಆದಿಲ್ ಷಾ ನಿರ್ಮಿಸಿದ)
>ಬೀದರ್ ನ ಅಷ್ಟೂರಿನ 12 ಸಮಾಧಿಗಳು ಗಮನಾರ್ಹ.
>ಮೂರನೇ ಮಹಮ್ಮದ್-ಮಹಮ್ಮದ್-ಕಾಲಿಮಲ್ಲಾ ಷಾ.
>ಬಹಮನಿ ರಾಜ್ಯದ 5 ಶಾಹಿ ಮನೆತನಗಳು:
*ವಿಜಯಪುರ-ಆದಿಲ್ ಶಾಹಿ(1489),
*ಬೀದರ್ -ಬರೀದ್ ಶಾಹಿ.
*ಗೋಲ್ಕೊಂಡ-ಕುತುಬ್ ಶಾಹಿ.
*ಅಹ್ಮದ್ ನಗರ-ನಿಜಾಮ್ ಶಾಹಿ
*ಬಿರಾರ್-ಇಮಾದ್ ಶಾಹಿ.
>ವಿಜಯಪುರದ ಆದಿಲ್ ಶಾಹಿಯ ಮೊದಲನೇ ಅರಸ-ಯೂಸುಫ್ ಆದಿಲ್ ಶಾಹಿ(ಸ್ಥಾಪಕ), ಕೊನೆಯ ಅರಸ-ಸಿಕಂದರ್ ಆದಿಲ್ ಷಾ.
ಎರಡನೇ ಇಬ್ರಾಹಿಂ ಆದಿಲ್ ಷಾ(ಜಗದ್ಗುರು ಬಾದಾಷಾ)(ಶ್ರೇಷ್ಠ ದೊರೆ):
>ಇವನ ರಾಜಪ್ರತಿನಿಧಿ-ಚಾಂದ್ ಬೀಬಿ.
>ಕಲಾಕಾರರಿಗಾಗಿ ನವರಸಪುರ ಹೆಸರಿನ ಉಪ ನಗರ ನಿರ್ಮಿಸಿದ.
>ದತ್ತ ದೇವಾಲಯಗಳನ್ನು ದುರಸ್ತಿ ಮಾಡಿಸಿ, ಪೂಜೆಗೆ ಅವಕಾಶ ಮಾಡಿಕೊಟ್ಟ.
>ಪುಸ್ತಕ- ಕಿತಾಬ್-ಇ-ನವರಸ.(ಸಂಗೀತ ಕ್ಷೇತ್ರದ ಶ್ರೇಷ್ಠ ಕೃತಿ. ಆರಂಭದಲ್ಲಿ ಸರಸ್ವತಿ, ಗಣಪತಿ, ಭೈರವ ಸ್ತುತಿ ಒಳಗೊಂಡಿದೆ.)
>ಇವನ ರಚನೆ-ಗಗನ್ ಮಹಲ್ & ಮೆಹತರ್ ಮಹಲ್ & ಇಬ್ರಾಹಿಂ ರೋಜಾ(ಭಾರತದಲ್ಲಿಯೇ ಏಕೈಕ ರೋಜಾ ಆಗಿದ್ದು, ದಕ್ಷಿಣ ಭಾರತದ ತಾಜ್ ಮಹಲ್ ಎಂದೂ ಕರೆಯುತ್ತಾರೆ. ಇದನ್ನು ಪತ್ನಿ ತಾಜ್ ಬೇಗಂಗಾಗಿ ಕಟ್ಟಿಸಿದ.
>1686-ಔರಂಗಜೇಬನು ವಶಪಡಿಸಿಕೊಳ್ಳುವುದರೊಂದಿಗೆ ಆದಿಲ್ ಶಾಹಿ ಮನೆತನ ಕೊನೆಗೊಂಡಿತು.
>ಬೀದರ್ ನ ಬರೀದ್ ಶಾಹಿ ಮನೆತನದ ಸ್ಥಾಪಕ-ಖಾಸಿಂಬರೀದ್. ಕೊನೆಗೆ ಇದು ವಿಜಯಪುರ ಆದಿಲ್ ಶಾಹಿ ಮನೆತನದಲ್ಲಿ ವಿಲೀನವಾಯಿತು.
>ಗೋಲ್ಕೊಂಡ ಕುತುಬ್ ಶಾಹಿ ಮನೆತನದ ಸ್ಥಾಪಕ-ಖುಲಿ ಕುತುಬ್ ಷಾ. ಈತ ಮಗನಿಂದಲೇ ಕೊಲೆಯಾದ.
>ಗೋಲ್ಕೊಂಡದಿಂದ ಹೈದರಾಬಾದಿಗೆ ರಾಜಧಾನಿ ಬದಲಿಸಿದವನು-ಇಬ್ರಾಹಿಂ
>ಬಳಿಕ ಇದು ಮೊಗಲಾರಿರಾ ವಶವಾಯಿತು.
ಅಹ್ಮದ್ ನಗರದ ಸ್ಥಾಪಕ-ಮಲಿಕ್ ಅಹ್ಮದ್. ಇದನ್ನು ಮೊಗಲರ ಔರಂಗಜೇಬನು ವಶಪಡಿಸಿಕೊಂಡ.
>ಬೀರಾರ್ ನ ಇಮಾದ್ ಶಾಹಿ ಮನೆತನದ ಸ್ಥಾಪಕ-ಫಾಟಾ-ಉಲ್ಲಾ(ಬಿರುದು ಇಮಾದ್-ಉಲ್-ಮುಳ್ಕ).
>ರಾಜಧಾನಿ ಎಲಿಕ್ಯಾಪುರ.
>ಇದೂ ಕೂಡ ಕೊನೆಗೆ ವಿಜಯಪುರ ಆದಿಲ್ ಶಾಹಿಗಳ ವಶವಾಯಿತು.
ಆದಿಲ್ ಶಾಹಿಗಳ ಕೊಡುಗೆಗಳು:
ವಿಜಯಪುರದ ಕೋಟೆಯು 96 ಕೊತ್ತಲ, 6 ಮಹಾದ್ವಾರಗಳನ್ನು ಒಳಗೊಂಡಿದೆ. -1656-ಗೋಳಗುಮ್ಮಟ-ಮಹಮ್ಮದ್ ಆದಿಲ್ ಷಾ(ಒಳಗೆ ಪಿಸುಗುಟ್ಟುವ ಮೊಗಸಾಲೆ ಇದೆ)-ಭಾರತದ ಮೊದಲ & ಜಗತ್ತಿನ ಎರಡನೇ ಗುಮ್ಮಟ.