ಬೆಂಗಳೂರು: ಪ್ರೀತಿಗೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದರೆಂದು ಮನನೊಂದ ಪ್ರೇಮಿಗಳು ನೈಸ್ ರಸ್ತೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಮೃತದೇಹಗಳು ಅಂಜನಾಪುರದ ತುಳಸಿಪುರ ಕೆರೆಯಲ್ಲಿ ಪತ್ತೆಯಾಗಿವೆ.
ಮೃತ ಪ್ರೇಮಿಗಳನ್ನು ಅಂಜನಾ(20) & ಶ್ರೀಕಾಂತ್(24) ಎಂದು ಗುರುತಿಸಲಾಗಿದೆ. ಬಿಬಿಎ ವಿದ್ಯಾರ್ಥಿನಿಯಾಗಿದ್ದ ಅಂಜನಾ ತಲಘಟ್ಟಪುರ ನಿವಾಸಿಯಾಗಿದ್ದರೆ, ಬಿಕಾಂ ವಿದ್ಯಾರ್ಥಿ ಶ್ರೀಕಾಂತ್ ಕೋಣನಕುಂಟೆ ನಿವಾಸಿ ಎಂಬುದು ತಿಳಿದುಬಂದಿದೆ. ಶ್ರೀಕಾಂತ್ ಗೆ ಈಗಾಗಲೇ ಮದುವೆಯಾಗಿದ್ದರೂ ಅಂಜನಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಇಬ್ಬರೂ ಒಟ್ಟಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆರೆಗೆ ಜಿಗಿದಿದ್ದಾರೆ. ಆತ್ಮಹತ್ಯೆಗೂ ಮುನ್ನ ಅಂಜನಾ ವಿಡಿಯೋ ಮಾಡಿದ್ದು, ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಒಟ್ಟಿಗೆ ಬದುಕಲು ಸಾಧ್ಯವಾಗಲ್ಲವೆಂದು ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾಳೆ.