ಧಾರವಾಡ: ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಹತ್ಯೆಯಾಗಿದ್ದ ಆಕಾಶ್ ಮಠಪತಿ ಅವರ ಹತ್ಯೆ ಸಂಬಂಧ ತನಿಖೆ ಮುಂದುವರಿಸಿರುವ ಪೊಲೀಸರು ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತನ ಮಾವ ಮೋಹನ್ ನಾಯಕ, ಅತ್ತೆ ಶ್ರೀದೇವಿ, ಪತ್ನಿ ಕಾವ್ಯಾ ಹಾಗೂ ಬಾಮೈದಾ ಭರತ್ ಬಂಧಿತರಾಗಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾದಂತಾಗಿದೆ.
ಹೆಂಡತಿ ಸೇರಿದಂತೆ ಅವರ ಕುಟುಂಬಸ್ಥರ ಕುಮ್ಮಕ್ಕಿನಿಂದಲೇ ನಮ್ಮ ಮಗನ ಹತ್ಯೆಯಾಗಿದೆ ಎಂದು ಆರೋಪಿಸಿ ಈ 12 ಮಂದಿಯ ವಿರುದ್ಧ ಮೃತನ ತಂದೆ ಶೇಖರಯ್ಯ ದೂರು ದಾಖಲಿಸಿದ್ದರು.