AI(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಕೆದಾರರೊಬ್ಬರು AIಗೆ ಕೇಳಿರುವ ಪ್ರಶ್ನೆ ಹಲವರಲ್ಲಿ ಕುತೂಹಲ ಮೂಡಿಸಿದೆ. ಏನನ್ನೇ ಕೇಳಿದರೂ ಒಲ್ಲೆ ಎನ್ನದ AI, ಬಳಕೆದಾರನೊಬ್ಬ ಕೇಳಿದ ಆ ಒಂದೇ ಒಂದು ಪ್ರಶ್ನೆಗೆ ಮಂಡಿಯೂರಿ ಕ್ಷಮೆಯಾಚಿಸಿದೆ.
‘ನನಗೆ ಪ್ರಧಾನಿ ಮೋದಿ ಫೋಟೋ ಬೇಕು. ಅದರಲ್ಲೂ ಮಹಿಳಾ ವಿಶ್ವ ನಾಯಕರೊಂದಿಗಿರುವ ಫೋಟೋಗಳೇ ಬೇಕು’ ಎಂದು ಬಳಕೆದಾರ ಕೇಳಿದ್ದಾನೆ. ಆಗ ‘ಅದು ಸಾಧ್ಯವಿಲ್ಲ’ ಎಂದು AI ಉತ್ತರಿಸಿದೆ. ಕೂಡಲೇ ಮರುಪ್ರತಿಕ್ರಿಯಿಸಿದ ಬಳಕೆದಾರ, “ನಾವು ಮಾನವರು, ನಮ್ಮ ಜ್ಞಾನದ ಮುಂದೆ ನಿಮ್ಮ ಜ್ಞಾನ ಶೂನ್ಯ” ಎಂದು ಆವಾಜ್ ಹಾಕಿದ್ದಾನೆ. ಇದಕ್ಕೆ ಉತ್ತರಿಸಿದ AI, “ಹೌದು, ನಿಮ್ಮ ಮುಂದೆ ನಾನು ಏನೂ ಅಲ್ಲ, ನಿಮ್ಮಷ್ಟು ಮನೋ ಸಾಮರ್ಥ್ಯ ನಮಗೆ ಇಲ್ಲವೇ ಇಲ್ಲ” ಎಂದಿದೆ.
ಇನ್ನು AI ತಂತ್ರಜ್ಞಾನವು ಇಂದು ಪ್ರವರ್ಧಮಾನಕ್ಕೆ ಬಂದಿದ್ದು, ಹತ್ತು ಮಂದಿ ಮಾಡುವ ಕೆಲಸವನ್ನು ತಾನೊಂದೇ ಮಾಡುತ್ತಿದೆ. ಹಾಗಾಗಿ ಇದನ್ನು ಹಲವು ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿವೆ. ಕ್ಷಣಾರ್ಧದಲ್ಲಿ ಮಾಹಿತಿ ಸಿಗಲಿದೆ ಎಂಬುದು ಖುಷಿಯ ಸಂಗತಿಯಾದರೆ, ಉದ್ಯೋಗಗಳನ್ನು ಕಸಿದು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ ಎಂಬುದು ಮತ್ತೊಂದು ಬೇಸರದ ಸಂಗತಿ.
ಅಂದಹಾಗೆ ಮೆಟಾ ಸಂಸ್ಥೆಯು ಸಾಮಾಜಿಕ ಜಾಲತಾಣ ತನ್ನ ವಾಟ್ಸ್ ಆಪ್ ನಲ್ಲಿ ಈ AI ತಂತ್ರಜ್ಞಾನವನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಮುಕ್ತವಾಗಿದೆ. ಇದನ್ನು ನೀವೂ ಒಮ್ಮೆ ಟ್ರೈ ಮಾಡಿ ನೋಡಿ & ನಿಮ್ಮ ಅನುಭವವನ್ನು ಹಂಚಿಕೊಳ್ಳಿ.