ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಆರೋಪಿ ದರ್ಶನ್ ನೋಡಲು ಇಂದು ಜೈಲಿಗೆ ನಟಿ ರಕ್ಷಿತಾ & ಪತಿ ಪ್ರೇಮ್ ಆಗಮಿಸಿದ್ದಾರೆ. ಕೇಂದ್ರ ಕಾರಾಗೃಹದ ಸಿಬ್ಬಂದಿ ಅನುಮತಿ ಪಡೆದು ದಂಪತಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಇತ್ತೀಚೆಗೆ ದರ್ಶನ್ ನೋಡಲು ನಟ ಹಾಗೂ ಆಪ್ತ ವಿನೋದ್ ಪ್ರಭಾಕರ್ ಜೈಲಿಗೆ ಭೇಟಿ ನೀಡಿದ್ದುದು ಹಳೆಯ ವಿಚಾರ. ಈ ಪ್ರಕರಣದಲ್ಲಿ ದರ್ಶನ್ A೨ ಆರೋಪಿಯಾಗಿದ್ದು, ದರ್ಶನ್ ಆಪ್ತೆ ಪವಿತ್ರಾಗೌಡ A೧ ಆರೋಪಿಯಾಗಿದ್ದಾರೆ. ಪವಿತ್ರಾಗೌಡರ ಕುಟುಂಬಸ್ಥರು ನಿನ್ನೆಯಷ್ಟೇ ಆಕೆಯನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು.