ಅಹಮದಾಬಾದ್: ಕನ್ನಡ ಸೇರಿದಂತೆ ಬಾಲಿವುಡ್ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಜೂಹಿ ಚಾವ್ಲಾ, ಇತ್ತೀಚೆಗೆ ನಡೆದ ಉದ್ಯಮಿಗಳ ಸಭೆಯೊಂದರಲ್ಲಿ ತಮ್ಮ ಮದುವೆಯ ದಿನಗಳನ್ನು ಮೆಲುಕುಹಾಕಿಕೊಂಡು ಗದ್ಗದಿತರಾಗಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಾ, ನಾನು ಉದ್ಯಮಿ ಜಯ್ ಮೆಹ್ತಾ ಅವರನ್ನು 1995ರಲ್ಲಿ ಮದುವೆಯಾದೆ. ಆದರೆ ಮದುವೆಗೆ ವರ್ಷ ಇರುವಾಗಲೇ ನನ್ನ ತಾಯಿ ತೀರಿಹೋದರು. ಈ ದುಃಖದಲ್ಲಿದ್ದ ನನಗೆ ಆ ದಿನಗಳು ಸಂತೋಷ ಪಡುವ ದಿನಗಳು ಆಗಿರಲಿಲ್ಲ. ಈ ವಿಚಾರವನ್ನು ನನ್ನ ಭಾವಿ ಅತ್ತೆಗೆ ತಿಳಿಸಿದೆ. ಅದಾಗಲೇ ೨೦೦೦ ಮಂದಿಗೆ ಮದುವೆಯ ಆಮಂತ್ರಣ ನೀಡಲಾಗಿತ್ತು. ಆದರೆ ಅತ್ತೆ ಕೇವಲ 80, 90 ಜನರ ಸಮ್ಮುಖದಲ್ಲಿ ನಮ್ಮ ಮದುವೆ ನಡೆಯುವಂತೆ ನೋಡಿಕೊಂಡರು ಎಂದಿದ್ದಾರೆ.
ದಂಪತಿಗೆ ಅರ್ಜುನ್ ಮೆಹ್ತಾ ಹಾಗೂ ಜಾನ್ವಿ ಮೆಹ್ತಾ ಎಂಬ ಇಬ್ಬರು ಮಕ್ಕಳಿದ್ದಾರೆ.