ಬೆಂಗಳೂರು: ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದ ಮೇರೆಗೆ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಸಂದೇಶ ರವಾನಿಸಿದ್ದ. ಆದರೆ ಆತನ ಖಾತೆಯನ್ನು ನಾನು ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
ಈ ಕುರಿತು ಲೈವ್ ವಿಡಿಯೋ ಮಾಡಿರುವ ನಟಿ, ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ. ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು. ಹೀಗಾಗಿ ನಾನು ಆ ಖಾತೆಯನ್ನು ಬ್ಲಾಕ್ ಮಾಡಿದ್ದೆ. ಸ್ಕ್ರೀನ್ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಹಾಕಿಲ್ಲ.
ನನಗೆ ಆ ರೀತಿ ಮರ್ಮಾಂಗದ ಚಿತ್ರವಾಗಲಿ, ಅರೆ ಬೆತ್ತಲೆ ಫೋಟೋ ಆಗಲಿ ಅಥವಾ ಹಸ್ತಮೈಥುನದ ವಿಡಿಯೋ ಆಗಲಿ ಬಂದರೆ ಅಂಥ ಖಾತೆಗಳನ್ನು ಕೂಡಲೇ ಬ್ಲಾಕ್ ಮಾಡುತ್ತೇನೆ. ನನ್ನ ಇನ್‌ಸ್ಟಾ ಖಾತೆಯ ಬ್ಲಾಕ್ ಲಿಸ್ಟ್ ನೋಡಿದಾಗ ಅದರಲ್ಲಿ ರೇಣುಕಾಸ್ವಾಮಿ ಅವರ ನಕಲಿ ಖಾತೆ ಕೂಡ ಇದೆ. ಆದರೂ ನಾನು ಇಷ್ಟು ದಿನ ಸುಮ್ಮನಿದ್ದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ.. ಎನಿಸುತ್ತದೆ ಎಂದಿದ್ದಾರೆ.