ಪತಿ ಇಲ್ಲದೆ ಗರ್ಭಿಣಿ: ಭಾವನಾಗೆ ಈಗ 6 ತಿಂಗಳು!

ಬೆಂಗಳೂರು: ಕನ್ನಡದ ಖ್ಯಾತ ನಟಿ ಭಾವನಾ ರಾಮಣ್ಣ ಅವರು ತಮ್ಮ ನಲವತ್ತನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ.

ಹೌದು, ಅವಿವಾಹಿತರಾಗಿರುವ ಅವರು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಅವರೇ ಹೇಳಿರುವಂತೆ, ನನಗೆ  ವ್ಯವಸ್ಥೆಯಲ್ಲಿಯೇ ಮಕ್ಕಳನ್ನು ಹೊಂದಬೇಕೆಂಬ ಬಯಕೆ ಇತ್ತು. ಆದರೆ ನನ್ನ ಹಣೆಬರದಲ್ಲಿ ಮದುವೆ ಎಂಬ ಯೋಗ ಕೂಡಿ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಐವಿಎಫ್ ಮುಖೇನ ತಾಯಿಯಾಗುವ ಕನಸನ್ನು ಕಟ್ಟಿಕೊಂಡೇ. ಆರಂಭದಲ್ಲಿ ಮೂರು ಕ್ಲಿನಿಕ್ ಗಳು ನನ್ನನ್ನು ರಿಜೆಕ್ಟ್ ಮಾಡಿದವು. ನಂತರ ಡಾ.ಸೌಮ್ಯಾ ಅವರು ನನ್ನನ್ನು ಬರಮಾಡಿಕೊಂಡರು. ಪರಿಣಾಮ ನಾನು ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ. ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದು, ವರ್ಷಾಂತ್ಯಕ್ಕೆ ನನ್ನ ಅವಳಿ ಮಕ್ಕಳು ನನ್ನ ಕೈಯಲ್ಲಿರಲಿವೆ. ನನ್ನ ಮಕ್ಕಳಿಗೆ ಅಪ್ಪ ಇಲ್ಲ ಎಂಬ ಕೊರಗು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *