ಬೀಜಿಂಗ್: ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಜೋಡಿಯೊಂದು ಅದ್ಧೂರಿ ಮದುವೆ ಮಾಡಿಕೊಂಡಿದೆ. ಮದುವೆಗೆ ಹಾಜರಾಗಿದ್ದ ಎಲ್ಲರಿಗೂ 66 ಸಾವಿರ ರೂ. ನಗದು ಹಾಗೂ ಹಲವು ವೈವಿಧ್ಯಮಯ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಿ ಕಳುಹಿಸಲಾಗಿದೆ.
ಈ ಕುರಿತು ಮದುವೆಗೆ ತೆರಳಿದ್ದ ಪ್ರವಾಸಿ ಇನ್ಫ್ಲುಯೆನ್ಸರ್ ದಾನಾ ವಾಂಗ್ ಎಂಬುವವರು ಮದುವೆ ಮಂಟಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮದುವೆಗೆ ಬರುವ ಎಲ್ಲಾ ಹಿತೈಷಿಗಳಿಗೂ ಬಂದು, ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಲಾಗಿದೆ. ಉಳಿದುಕೊಳ್ಳಲು ಫೈವ್ ಸ್ಟಾರ್ ಹೋಟೆಲ್ ವ್ಯವಸ್ಥೆ, ಹೋಟೆಲಿನಿಂದ ಮದುವೆ ನಡೆಯುತ್ತಿದ್ದ ಅರಮನೆಗೆ ಬರಲು ರೋಲ್ಸ್ ರಾಯ್ ಕಾರುಗಳ ವ್ಯವಸ್ಥೆ, ಮಂಟಪದಲ್ಲಿ ವೈವಿಧ್ಯಮಯ ಖಾದ್ಯಗಳು ಹಾಗೂ ಐಸ್ ಕ್ರೀಮ್ ಸೇರಿದಂತೆ ಇನ್ನಿತರೇ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಮದುವೆ ಮಾಡಿಕೊಂಡ ವಧು, ವರ ಅಥವಾ ಅವರ ಹಿನ್ನೆಲೆ ಇನ್ನಿತರೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.