ಅಯೋಧ್ಯೆ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿರುವ ರೈಲು ನಿಲ್ದಾಣದ ಗೋಡೆಯು ಕುಸಿದಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ.
ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಪ್ರಕರಣದಿಂದ ಬಿಜೆಪಿಯ ಭ್ರಷ್ಟಾಚಾರ ಬಯಲಾಗಿದೆ ಎಂದು ಕಿಡಿಕಾರಿದೆ.
ಇನ್ನು ಆರು ತಿಂಗಳ ಹಿಂದಷ್ಟೇ ಈ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗಿತ್ತು. ಈ ಪೈಕಿ 20 ಮೀಟರ್ ಉದ್ದದ ಗೋಡೆಯು ಏಕಾಏಕಿ ಕುಸಿದು ಬಿದ್ದಿದೆ. ಇದನ್ನು ಕೇಂದ್ರ ಸರ್ಕಾರವು ಜೀರ್ಣೋದ್ಧಾರ ಮಾಡಿತ್ತು.