ಮಂಡ್ಯ: ಪ್ರೀತಿ ಒಪ್ಪದ ಟೀಚರ್ ಒಬ್ಬಳ ಮೇಲೆ ಪಾಗಲ್ ಪ್ರೇಮಿಯೊಬ್ಬ ಭೀಕರವಾಗಿ ದಾಳಿ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಟೀಚರ್ ಪೂರ್ಣಿಮಾ ಗಾಯಗೊಂಡವರಾಗಿದ್ದು, ಅಭಿಷೇಕ್ ಎಂಬಾತ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಟೀಚರ್ ಪಾಂಡವಪುರದ ಎಲೆಕೆರೆ ಹ್ಯಾಂಡ್ ಪೋಸ್ಟ್ ಮೂಲದವರು ಎಂಬ ಮಾಹಿತಿ ಲಭಿಸಿದೆ.
ಟೀಚರ್ ಗೆ ಅದಾಗಲೇ ಮದುವೆಯಾಗಿತ್ತು. ಆದರೂ ಪಾಗಲ್ ಪ್ರೇಮಿ ಅಭಿಷೇಕ್ ಪ್ರೀತ್ಸೇ ಪ್ರೀತ್ಸೇ ಆಂಟಿ ಎಂದು ಹಿಂದೆ ಬಿದ್ದಿದ್ದ. ಆದರೆ ಟೀಚರ್ ಒಪ್ಪದಿದ್ದಕ್ಕೆ ಎರಡು ಕುಡುಗೋಲು ಮತ್ತು ಎರಡು ಚಾಕು ತಂದು ಮನೆ ಬಳಿಯೇ ಭೀಕರವಾಗಿ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಸದ್ಯ ಗಾಯಾಳು ಟೀಚರ್ ಪೂರ್ಣಿಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭಿಸಬೇಕಿದೆ.