ಬೆಂಗಳೂರು: ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿತೆಂದು ಪ್ರಶ್ನಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಹಾಗೂ ಸಪ್ಲೇಯರ್ ಸೇರಿ ಗ್ರಾಹಕನೊಬ್ಬನನ್ನು ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರು ಗ್ರಾಮಾಂತರದ ಜಿಗಣಿಯ ಪ್ರೀತಿಧಾಮ ಬಾರ್‌ನಲ್ಲಿ ನಡೆದಿದೆ.
ಗಾಯಾಳು ವ್ಯಕ್ತಿಯನ್ನು ಕೊಪ್ಪಗೇಟ್ ನಿವಾಸಿ ಬಾಬು(30) ಎಂದು ಹೇಳಲಾಗಿದೆ. ಪ್ರಶ್ನಿಸುತ್ತಿದ್ದಂತೆ ಸಪ್ಲೇಯರ್ ಜೀವನ್ ಗೌಡ ಗ್ರಾಹಕನ ಮೇಲೆ ಮುಗಿಬಿದ್ದಿದ್ದ. ಇದನ್ನು ಕಂಡ ಬಾರ್ ಕ್ಯಾಶಿಯರ್ ಸಮಂತ್ ಗೌಡ ಕೂಡ ಸಾಥ್ ನೀಡಿದ್ದ. ಬೀಯರ್ ಬಾಟಲ್ ನಲ್ಲಿ ಹಲ್ಲೆ ನಡೆಸಿರುವ ಪರಿಣಾಮ ತಲೆ ತೂತು ಬಿದ್ದಿದ್ದು ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.