ಆಂಧ್ರ ಪ್ರದೇಶ: ಪತ್ನಿಯರೇ ಸೇರಿ ಪತಿಗೆ ಮೂರನೇ ಮದುವೆ ಮಾಡಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದಬಯಲು ತಾಲೂಕಿನಲ್ಲಿ ನಡೆದಿದೆ.
ಪಂಡನ್ನ ಮೂರನೇ ಮದುವೆ ಮಾಡಿಕೊಂಡ ಅದೃಷ್ಟವಂತನಾಗಿದ್ದಾನೆ. ಈತನ ಮೊದಲನೇ ಪತ್ನಿ ಪಾರ್ವತಮ್ಮನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅಪ್ಪಲಮ್ಮ ಎಂಬಾಕೆಯನ್ನು 2007ರಲ್ಲಿ ಮದುವೆಯಾಗಿದ್ದ. ಈ ಎರಡನೇ ಪತ್ನಿಗೆ ಒಂದು ಗಂಡುಮಗುವಿನ ಸಂತಾನವಾಗಿದೆ. ಆದರೆ ನನಗೆ ಮತ್ತೊಂದು ಮಗು ಬೇಕೆಂದು ಪಂಡನ್ನ ಕೇಳಲಾಗಿ, ಇಬ್ಬರೂ ಪತ್ನಿಯರು ಮತ್ತೋರ್ವ ಯುವತಿಯನ್ನು ಹುಡುಕಿ ಮದುವೆ ಮಾಡಿದ್ದಾರೆ.
ಇನ್ನು ಮದುವೆಯಾದ ಹಿನ್ನೆಲೆಯಲ್ಲಿ ಪತಿಗೆ ಮೊದಲ ಮತ್ತು ಎರಡನೇ ಪತ್ನಿಯರೇ ಶುಭಕೋರಿ ಗ್ರಾಮದಲ್ಲಿ ಪೋಸ್ಟರ್ ಹಾಕಿದ್ದಾರೆ. ಈ ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.