ಕೊಡಗು: ಹೃದಯಾಘಾತಕ್ಕೆ ತುತ್ತಾಗಿ 24 ವರ್ಷದ ಯುವತಿ ಕೊನೆಯುಸಿರೆಳೆದಿರುವ ಘಟನೆ ಇಂದು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ನೆಲಜಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಗ್ರಾಮದ ನೀಲಿಕಾ ಪೊನ್ನಪ್ಪ ಎಂದು ಗುರುತಿಸಲಾಗಿದೆ. ಮೃತೆ ಮಡಿಕೇರಿಯ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಎಂದಿನಂತೆ ಕೆಲಸಕ್ಕೆ ತೆರಳಬೇಕೆಂದು ಸಿದ್ಧಳಾಗಿದ್ದಳು. ಆದರೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಮಂಚದ ಮೇಲೆ ಕುಸಿದು ಬಿದ್ದಳು. ಕೂಡಲೇ ತಾಯಿ ಮಾತನಾಡಿಸಿದ್ದು, ಮೃತಪಟ್ಟ ಬಗ್ಗೆ ಖಚಿತವಾಗಿದೆ.
ವಿಷಯ ತಿಳಿದು ಯುವತಿಯ ಸಹೋದ್ಯೋಗಿಗಳು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೃತದೇಹವನ್ನು ನೋಡಲು ಆಗಮಿಸುತ್ತಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಸಂಬಂಧಿಕರು & ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚೆಗೆ ಬಾಲಕ ರು,ಯುವಕರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.