ಪತ್ನಿ ಎದುರೇ ಪತಿಯ ಬರ್ಬರ ಹತ್ಯೆ

ಕಲಬುರಗಿ: ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಪತ್ನಿ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಗರದ ಹೊರವಲಯದ ಕೆಸರಟಗಿ ಬಳಿ ನಡೆದಿದೆ.

ಮೃತನನ್ನು ಕಪಿಲ್ ಗಾಯಕ್ವಾಡ್ ಎಂದು ಹೇಳಲಾಗಿದ್ದು, ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಲಾಗಿದೆ. ಈ ವೇಳೆ ಪತ್ನಿ ಕೂಡ ಸ್ಥಳದಲ್ಲೇ ಇದ್ದುದರಿಂದ ಪತ್ನಿಯೇ ಕೊಲೆ ಮಾಡಿಸಿದ್ದಾಳೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪೊಲೀಸರು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *