ಗ್ರೂಪ್ ‘ಸಿ’ ಹುದ್ದೆಗಳ ಪಠ್ಯಕ್ರಮ: ಭೂ ಸುಧಾರಣೆ

ಭೂ ಸುಧಾರಣೆ:

>1888ರ ಮೈಸೂರು ರೆವಿನ್ಯೂ ಕೋಡಿನ ಕಲಂ 79ರ ಅಡಿ ‘‘ಬೇಸಾಯಗಾರನಾದ ರೈತನಿಗೆ ಸಂಪೂರ್ಣ ರಕ್ಷಣೆಯಿದೆ’’ ಎಂದು ಹೇಳಲಾಗಿದೆ.

>1978ರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಜಮೀನು ವರ್ಗಾವಣೆ ನಿರ್ಬಂಧ) ಕಾಯ್ದೆ ಅಡಿ ಜಮೀನು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

>ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ವಗಳ ವಿಧಿ 39(ಬಿ) & (ಸಿ) ಅಡಿಯ ತತ್ವಕ್ಕನುಗುಣವಾಗಿ ಜಾರಿಮಾಡಲಾಗಿದೆ.

>ಸಂವಿಧಾನದ ಮೊದಲನೇ ತಿದ್ದುಪಡಿ ಸೇರಿದಂತೆ ಭೂ ಸುಧಾರಣೆಗೆ ಸಂಬಂಧಿಸಿದಂತೆ ಒಟ್ಟು 11 ತಿದ್ದುಪಡಿಗಳನ್ನು ಮಾಡಲಾಗಿದೆ.

ಭೂ ಸುಧಾರಣೆ ಮತ್ತು ದೇಶಾದ್ಯಂತ ಕಂಡು ಬಂದ ರೈತ ಹೋರಾಟಗಳು:

A.ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಹೋರಾಟಗಳು:

>ಸಂತಾಲರ ದಂಗೆ(1855-56)-ಜಾರ್ಖಂಡ್

>ನೀಲಿ ಬೆಳೆಗಾರರ ಹೋರಾಟ(1860)-ಬಂಗಾಳ

>ಚಂಪಾರಣ್ ಆಂದೋಲನ(1917-18)-ಬಿಹಾರ

>ಖೇಡಾ ರೈತ ಹೋರಾಟ(1918)-ಗುಜರಾತ್

>ಬಾರ್ಡೋಲಿ ಸತ್ಯಾಗ್ರಹ(1920)-ಗುಜರಾತ್

>ಮಲಬಾರಿನ ಮೋಪ್ಲಾ ದಂಗೆ(1921)-ಕೇರಳ

>ಪಂಜಾಬಿನ ರೈತ ಬಂಡಾಯ(1930)

B.ಸ್ವಾತಂತ್ರ್ಯ ನಂತರದ ಹೋರಾಟಗಳು:

>ತೆಲಂಗಾಣ ರೈತ ಹೋರಾಟ(1947-51)

>ನಕ್ಸಲಬಾರಿ ರೈತ ಹೋರಾಟ(1967)-ಪಶ್ಚಿಮ ಬಂಗಾಳ

ಭೂ ಸುಧಾರಣಾ ಕಾಯಿದೆಯ ಉದ್ದೇಶಗಳು:

೧.ಜಮೀನ್ದಾರಿ ಪದ್ಧತಿಯ ನಿರ್ಮೂಲನೆ(ಭೂ ಮಾಲೀಕ ವರ್ಗದ ಹಿಡಿತ ಕಡಿಮೆಗೊಳಿಸುವುದು)

೨.ಗೇಣಿ ಪದ್ಧತಿಯಲ್ಲಿ ಸುಧಾರಣೆ ತರುವುದು(ಭೂ ಹೀನ  ನಿರ್ಮೂಲನೆ ಮಾಡುವುದು).

೩.ಗರಿಷ್ಠ ಹಿಡುವಳಿಯ ಮಿತಿ

೪.ಆರ್ಥಿಕ ಹಿಡುವಳಿಗಳ ರಚನೆ(ಖರ್ಚು ಕಳೆದು, ಜೀವನೋಪಾಯಕ್ಕೆ ಬೆಳೆದ ಬೆಳೆ)

೫.ಸಹಕಾರಿ ಬೇಸಾಯ ಅಭಿವೃದ್ಧಿ(ಎಲ್ಲಾ ರೈತರು ಸೇರಿ ಬೆಳೆ ಬೆಳೆದು, ಭೂಮಿ ಅಭಿವೃದ್ಧಿಗೆ ಬೇಕಾದಷ್ಟು ಬೆಳೆಯನ್ನು ತೆಗೆದು, ಉಳಿದ ಬೆಳೆಯನ್ನು ಹಂಚಿಕೊಳ್ಳುವುದು.)

ಭೂ ಸುಧಾರಣೆ & ಕೇಂದ್ರ ಸರ್ಕಾರ:

ಜೆ.ಸಿ.ಕುಮಾರಪ್ಪ ಸಮಿತಿ-1947:

>ತೀರಾ ಅನಿವಾರ್ಯ ಇರದ ಹೊರತು ರೈತರು ತಮ್ಮ ಭೂಮಿಯನ್ನು ವರ್ಗಾಯಿಸುವಂತಿಲ್ಲ.

>ಕನಿಷ್ಟ 6 ವರ್ಷ ಕೃಷಿ ಮಾಡಿದ್ದರೆ ಅಂತಹ ವ್ಯಕ್ತಿಗಳಿಗೆ ಶಾಶ್ವತ ಭೂ ಮಾಲೀಕತ್ವದ ಹಕ್ಕನ್ನು ನೀಡಬೇಕು.

>ಬೇಸಾಯ ಮಾಡುವ ರೈತನಿಂದ ಜಮೀನ್ದಾರರು ಭೂಮಿಯನ್ನು ಕಿತ್ತುಕೊಳ್ಳದಂತೆ ನಿರ್ಬಂಧಿಸಬೇಕು.

>ರೈತನನ್ನು ಒಕ್ಕಲೆಬ್ಬಿಸಬಾರದು.

>ಭೂಮಿ ಖರೀದಿಸಲು ರೈತನಿಗೆ ಮುಕ್ತ ಅವಕಾಶ ಇರಬೇಕು.

>ಭೂಮಿ ಖರೀದಿಸಲು ಇಚ್ಛಿಸುವ ರೈತನಿಗೆ ಆರ್ಥಿಕ ಬೆಂಬಲ ನೀಡಬೇಕು.

>ಗೇಣಿ ಏರಿಸುವುದನ್ನು ತಡೆಯಬೇಕು

>ರೈತರಿಂದ ಪುಕ್ಕಟ್ಟೆ ಸೇವೆ ಪಡೆಯುವುದನ್ನು ನಿರ್ಬಂಧಿಸಬೇಕು.

>ಸರ್ಕಾರ ಯೋಗ್ಯವಾದ ಗೇಣಿ ಬಗ್ಗೆ ನಿರ್ಧರಿಸಬೇಕು.

ಕೇಂದ್ರೀಯ ಭೂ ಸುಧಾರಣಾ ಆಯೋಗ-1972:

>ಕುಟುಂಬವೊಂದರಲ್ಲಿ 5 ಜನರಿದ್ದು ನೀರಾವರಿ ಜಮೀನಾಗಿದ್ದರೆ 10ರಿಂದ 18 ಎಕರೆ,

>ಅರೆ ನೀರಾವರಿ ಜಮೀನಾಗಿದ್ದರೆ 27 ಎಕರೆ,

>ಒಣ ಭೂಮಿಯಾಗಿದ್ದರೆ ಗರಿಷ್ಠ 54 ಎಕರೆ ಭೂಮಿಯನ್ನು ಮಾತ್ರವೇ ಹೊಂದಬೇಕು.

2013LARR ಕಾಯಿದೆಗೆ ತಿದ್ದುಪಡಿ; LARR(ತಿದ್ದುಪಡಿ) ಮಸೂದೆ-2015:

>ರಕ್ಷಣೆ

>ಗ್ರಾಮೀಣ ಮೂಲಸೌಕರ್ಯ

>ಕೈಗೆಟಕುವ ದರದಲ್ಲಿ ವಸತಿ

>ಕೈಗಾರಿಕಾ ಕಾರಿಡಾರ್ ಗಳು

>ಮೂಲಸೌಕರ್ಯ ಯೋಜನೆಗಳು

ಭೂ ಸುಧಾರಣೆ & ಕರ್ನಾಟಕ:

>ಭೂ ಸುಧಾರಣೆ ವಿಷಯವು ರಾಜ್ಯಪಟ್ಟಿಯಲ್ಲಿದ್ದು, ಇದನ್ನು ಮೊದಲನೇ ತಿದ್ದುಪಡಿ ಮುಖೇನ 9ನೇ ಅನುಸೂಚಿಯಲ್ಲಿ ಸೇರಿಸಲಾಗಿದೆ.

>ಕರ್ನಾಟಕದಲ್ಲಿ 1930ರಲ್ಲಿ ದಿನಕರ ದೇಸಾಯಿ ನೇತೃತ್ವದಲ್ಲಿ ಅಂಕೋಲದಲ್ಲಿ ಮೊದಲ ಭೂ ಹೋರಾಟ ಆರಂಭವಾಯಿತು.

>1950ರಲ್ಲಿ ಉತ್ತರ ಕನ್ನಡದಲ್ಲಿ ಸಮಾಜವಾದಿಗಳಿಂದ ರೈತ ಹೋರಾಟ ನಡೆದಿತ್ತು.

>ಕರ್ನಾಟಕದಲ್ಲಿ 1951ರಲ್ಲಿ ಮೊದಲ ಬಾರಿಗೆ ನಡೆದ ರೈತ ಹೋರಾಟ- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು. ಈ ವೇಳೆ ಗೇಣಿ ಅಳತೆ ಮಾಡುವ ಕೊಳಗದ ವಿರುದ್ಧ ಹೋರಾಟ ಮಾಡಿದರು. ಈ ಹೋರಾಟದ ಮುಂದಾಳತ್ವ-ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲ ಗೌಡ ಅವರದ್ದಾಗಿತ್ತು. ಡಾ.ರಾಮಮನೋಹರ ಲೋಹಿಯಾ ಅವರೂ ಸಾಥ್ ನೀಡಿದ್ದರು.

ಕಾಗೋಡು ಸತ್ಯಾಗ್ರಹ-1951:

>ಜಮೀನ್ದಾರರಾಗಿದ್ದ ಗೌಡರ ವಿರುದ್ಧ ದೀವರ(ಈಡಿಗರ) ಹೋರಾಟ

>ನಾಯಕತ್ವ: ಹೆಚ್.ಗಣಪತಿಯಪ್ಪ

>ರಾಮ ಮನೋಹರ್ ಲೋಹಿಯಾ ಆಗಮಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಭೂ ಸುಧಾರಣೆಯಲ್ಲಿನ 6 ಮುಖ್ಯ ವರ್ಗಗಳು:

>ಮಧ್ಯವರ್ತಿಗಳ ನಿರ್ಮೂಲನೆ

>ಗೇಣಿ ಪದ್ಧತಿಯ ಸುಧಾರಣೆ(ಗೇಣಿದರ ನಿಯಂತ್ರಣ, ಹಿಡುವಳಿಯ ಭದ್ರತೆ & ಭೂ ಒಡೆತನದ ಹಕ್ಕು)

>ಭೂ ಹಿಡುವಳಿಯ ಗರಿಷ್ಠ ಮಿತಿ ನಿರ್ಧಾರ

>ಭೂ ಹಿಡುವಳಿಗಳ ಕ್ರೋಢೀಕರಣ

>ಭೂ ದಾಖಲೆಗಳ ಸಂಗ್ರಹ & ನವೀಕರಣ

>ಸಹಕಾರಿ ಬೇಸಾಯ

>ಮೈಸೂರು ಗೇಣಿದಾರಿಕೆಯ ಅಧಿನಿಯಮ-1952

>ಇದಕ್ಕೂ ಮುನ್ನ ಮೈಸೂರು ಗೇಣಿದಾರರ ಹಕ್ಕುಗಳು-1888 ಅಸ್ತಿತ್ವದಲ್ಲಿತ್ತು.

>1952ರ ಅಧಿನಿಯಮವು 1954ರ ಜ.1ರಿಂದ ಬಳ್ಳಾರಿ ಹೊರತುಪಡಿಸಿ ಎಲ್ಲಾ ಕಡೆ ಅನ್ವಯವಾಯಿತು.

>ಇದಕ್ಕೆ 1954ರಲ್ಲಿ ತಿದ್ದುಪಡಿ ಮಾಡಲಾಯಿತು. ಬಳಿಕ ಮೈಸೂರು ಗೇಣಿದಾರಿಕೆಯ(ತಿದ್ದುಪಡಿ) ಅಧಿನಿಯಮ-1954 ಆಯಿತು. ಇದರ ಅಡಿಯಲ್ಲಿ ಗೇಣಿದಾರರನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಲಾಯಿತು.

ಎ.ಸಂರಕ್ಷಿತ ಗೇಣಿದಾರರು: 9 ವರ್ಷಕ್ಕಿಂತ ಅಧಿಕ ಸಾಗುವಳಿ ಮಾಡಿದವರು(೨೫ ಎಕರೆ)

ಬಿ.ಸಂರಕ್ಷಿತವಲ್ಲದ ಗೇಣಿದಾರರು: 5 ವರ್ಷಗಳಿಗಿಂತ ಕಡಿಮೆ ಸಾಗುವಳಿ ಮಾಡಿದವರು(೨೫ರಿಂದ ೧೦೦ ಎಕರೆ)

ಸಿ.ಸಾಮಾನ್ಯ ಗೇಣಿದಾರರು: 10 ವರ್ಷಗಳ ಅನುಮತಿ ನೀಡಲಾಗಿತ್ತು.

>ಮೈಸೂರು ಟೆನೆನ್ಸಿ ಕಾಯಿದೆ-1952(ಇನಾಮ್ ಭೂಮಿ ರದ್ದತಿ ಶಾಸನ-1952):

>ಗೇಣಿಯ ಪ್ರಮಾಣವು ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚಿರಬಾರದಿತ್ತು.

>ಹನ್ನೆರಡು ವರ್ಷಕ್ಕಿಂತ ಹೆಚ್ಚು ಕಾಲ ವ್ಯವಸಾಯ ಮಾಡಿರುವ ಗೇಣಿದಾರ ಆ ಭೂಮಿಯ ಮಾಲೀಕತ್ವದ ಹಕ್ಕು ಪಡೆಯುತ್ತಿದ್ದ.

>ಇನಾಮುದಾರರು ಸರ್ಕಾರ & ಗೇಣಿದಾರರ ನಡುವೆ ಮಧ್ಯವರ್ತಿಗಳಾಗಿದ್ದರು.

>ರಿಲಿಜಿಯಸ್ & ಚಾರಿಟಬಲ್ ಆಕ್ಟ್-1955

>ಧಾರ್ಮಿಕ, ದತ್ತಿ ಇನಾಮುಗಳೆಲ್ಲವೂ ರದ್ದಾದವು

1956ರ ನಂತರ, ಆಡಳಿತದ ಸುಗಮತೆಗಾಗಿ ರಾಜ್ಯವನ್ನು ನಾಲ್ಕು ಪ್ರಾದೇಶಿಕ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಆದರೆ ಆ ಭಾಗಗಳಲ್ಲಿ ಜಾರಿಯಲ್ಲಿದ್ದ ಭೂ ಕಾನೂನುಗಳಿಗೂ, ಹಳೇ ಮೈಸೂರು ಪ್ರಾಂತ್ಯದ ಭೂ ಕಾನೂನುಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದವು. ಹಾಗಾಗಿ ರಾಜ್ಯಾದ್ಯಂತ ಏಕರೂಪದ ಭೂ ಕಾನೂನು ಜಾರಿಗೊಳಿಸುವ ಮುಖೇನ ಶ್ರೀಮಂತರ ಶೋಷಣೆಯಿಂದ ಗೇಣಿದಾರರನ್ನು ರಕ್ಷಿಸುವುದು ಅನಿವಾರ್ಯವಾಗಿತ್ತು.

ಬಿ.ಡಿ.ಜತ್ತಿ ಸಮಿತಿ-1957:

>ಈ ಸಮಿತಿಯನ್ನು Mysore Mining and Agricultural Land Act Committee(ಮೈಸೂರು ಗಣಿ ಮತ್ತು ಕೃಷಿ ಭೂಮಿ ಕಾಯ್ದೆ ಸಮಿತಿ) ಎಂದೂ ಕರೆಯಲಾಯಿತು. ಸಮಿತಿಯು 1959ರಲ್ಲಿ ವರದಿ ಸಲ್ಲಿಸಿತು.

ಸಮಿತಿಯ ಶಿಫಾರಸು:

1. ಐವರು ಸದಸ್ಯರಿರುವ ಪ್ರತೀ ಕುಟುಂಬ ಗರಿಷ್ಠ 116 ಎಕರೆ ಒಣ ಭೂಮಿ ಅಥವಾ 27 ಎಕರೆ ನೀರಾವರಿ ಭೂಮಿ ಹೊಂದಬಹುದು.

1.ಭೂ ಮಾಲೀಕರಿಗೆ ಭೂ ಮಾಲೀಕತ್ವವನ್ನು ಕ್ರಮಬದ್ಧಗೊಳಿಸಬೇಕು.

2. ಕುಟುಂಬದ ಜನಸಂಖ್ಯೆ ಆಧರಿಸಿ ಭೂ ಮಾಲೀಕತ್ವವನ್ನು ನೀಡಬೇಕು.

3. ಸ್ವಂತ ಕೃಷಿಗಾಗಿ ಮಾತ್ರವೇ ಜಮೀನ್ದಾರರು ತಮ್ಮ ಬಳಿ ಭೂಮಿಯನ್ನು ಉಳಿಸಿಕೊಳ್ಳಬೇಕು.

4. ಭೂಮಿ ಕಳೆದುಕೊಳ್ಳುವ ಜಮೀನ್ದಾರರಿಗೆ ಇಂತಿಷ್ಟು ಪರಿಹಾರ ನಿಗದಿಪಡಿಸಬೇಕು.

5. ಕೃಷಿಕರಲ್ಲದವರಿಂದ ಕೃಷಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು.

6. ಗೇಣಿ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

7.ಗುತ್ತಿಗೆ ಪಡೆಯುವುದನ್ನೂ ನಿಷೇಧಿಸಬೇಕು.

8. ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಬೇಕು.

ಬಿ.ಡಿ.ಜತ್ತಿ ಸಮಿತಿಯ ಶಿಫಾರಸುಗಳನ್ನು 1959ರಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತ ಚರ್ಚೆಯು 10 ದಿನಗಳವರೆಗೆ ಸಾಗಿತು.

ಭೂ ಸುಧಾರಣಾ ಕಾಯ್ದೆ 1961:

ಆಯ್ಕೆ ಸಮಿತಿಯು ಕೆಲ ಬದಲಾವಣೆಗಳೊಂದಿಗೆ ಬಿ.ಡಿ.ಜತ್ತಿ ಸಮಿತಿಯ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತು. ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿ 1962ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆ ಹೆಸರಿನಲ್ಲಿ ಜಾರಿಗೆ ಬಂದಿತು. ಆದರೆ ಈ ಕಾಯಿದೆಯು 1965ರಲ್ಲಿ ಪೂರ್ಣವಾಗಿ ಜಾರಿಗೆ ಬಂದಿತು. ಆದರೂ ಇದನ್ನು 1961ರ ಭೂ ಸುಧಾರಣಾ ಕಾಯಿದೆ ಎಂದೇ ಕರೆಯಲಾಗುತ್ತದೆ.

>1965ರ ಅ.2ರಿಂದ ಜಾರಿಗೆ ತರಲಾಯಿತು.

ಕಾಯಿದೆಯಲ್ಲಿದ್ದ ಪ್ರಮುಖ ಅಂಶಗಳು:

1.ಯಾವುದೇ ಸಂಘ ಸಂಸ್ಥೆಗಳು ಭೂಮಿಯನ್ನು ಆಕ್ರಮಣ ಮಾಡುವಂತಿಲ್ಲ.

2. ಇಂತಿಷ್ಟೇ ಗೇಣಿ ಕೊಡಬೇಕೆಂದು ಸೂಚನೆ ಇಲ್ಲ.

3. ಜಮೀನು ಮಾಲೀಕರು ಅರ್ಜಿದಾರರನ್ನು ಜಮೀನಿನಿಂದ ತೆರವು ಮಾಡಬೇಕಾದರೆ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.

4. ಕುಟುಂಬವೊಂದು ಗರಿಷ್ಠ 27 ಎಕರೆ ಭೂಮಿಯನ್ನಷ್ಟೇ ಹೊಂದಬೇಕು. ಆದರೆ ಐದು ಜನರಿರುವ ಕುಟುಂಬ 216 ಎಕರೆ ಭೂಮಿಯನ್ನು ಹೊಂದಬಹುದು.

5. ಜಮೀನ್ದಾರರು ಸ್ವಂತ ಉಳುಮೆಗಾಗಿ ಮಾತ್ರವೇ ಕೃಷಿ ಭೂಮಿಯನ್ನು ಪಡೆಯಬೇಕು.

6.ಭೂಮಿಯನ್ನು ಗಣಿಗಾರಿಕೆಗೆ ಬಳಸುವುದನ್ನು ನಿಷೇಧಿಸಬೇಕು.

7.ಭೂಮಿಯಲ್ಲಿ ಮೊದಲು ಗಣಿಗಾರಿಕೆ ಆರಂಭಿಸಿ ನಂತರ ಸರ್ಕಾರವೇ ಖಾಸಗಿಯವರಿಗೆ ವಹಿಸಲಿದೆ.

8.ಪ್ಲಾಂಟೇಷನ್ ಮಾಡುವಂಥವರಿಗೆ ಗರಿಷ್ಠ 100 ಎಕರೆ ಮಾತ್ರ.

9.ಕಾಯಿದೆ ಅಡಿಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಗರಿಷ್ಠ 10000 ರೂ. ಪರಿಹಾರ

10.ಜಿಲ್ಲಾ ಮಟ್ಟದಲ್ಲಿ “ಜಿಲ್ಲಾ ಮ್ಯಾಜಿಸ್ಟ್ರೇಟ್ ಲ್ಯಾಂಡ್ ಪಂಚಾಯತ್” ರಚಿಸಬೇಕು. ಇಲ್ಲಿ ನಡೆಯುವ ವಿಚಾರಣೆಗಳಲ್ಲಿ ಭಾಗವಹಿಸಲು ವಕೀಲರಿಗೆ ಅವಕಾಶ ನೀಡಬೇಕು.

11. ಸೈನಿಕನಾದವನು ಹಿಡುವಳಿಯಲ್ಲಿರುವ ತನ್ನ ಭೂಮಿಯನ್ನು ಸ್ವಂತ ಕೃಷಿಗಾಗಿ ಹಿಂದಿರುಗಿಸಬಹುದು.

ಮೇಲಿನ ವಿನಾಯಿತಿಗಳು ಈ ಕೆಳಗಿನವರಿಗೆ ಅನ್ವಯಿಸುತ್ತಿರಲಿಲ್ಲ.

18 ವರ್ಷದೊಳಗಿನ ಅಪ್ರಾಪ್ತರಿಗೆ, ಅವಿವಾಹಿತ ಪುತ್ರಿಯರಿಗೆ, ವಿಧವೆಯರಿಗೆ, ಬುದ್ಧಿ ಮಾಂಧ್ಯರಿಗೆ ಮತ್ತುಅಂಗವಿಕಲರಿಗೆ..

ಕಾಯಿದೆಯ ಹಿನ್ನೆಲೆ:

>1965ರ ಅ.2ರಂದು ಜಾರಿಯಾಯಿತು.

>5 ಜನರಿರುವ ಕುಟುಂಬಕ್ಕೆ ಗರಿಷ್ಠ-10 ಯುನಿಟ್(54 ಎಕರೆ)

>10 ಜನರಿರುವ ಕುಟುಂಬಕ್ಕೆ ಗರಿಷ್ಠ-20 ಯುನಿಟ್(108 ಎಕರೆ)

ಭೂ ಸುಧಾರಣಾ ಕಾಯಿದೆ-1974:

>ಅಂದಿನ ಸಿಎಂ: ಡಿ.ದೇವರಾಜ ಅರಸು

>ಅರಸುಗೆ ಸಾಥ್ ನೀಡಿದ್ದವರು ಹುಚ್ಚಮಾಸ್ತಿಗೌಡ-ಬಿ.ಸುಬ್ಬಯ್ಯ ಶೆಟ್ಟಿ

>ಮಾ.1ರಿಂದ ಜಾರಿಗೆ ಬಂತು.

>ಘೋಷಣೆ: “ಉಳುವವನೇ ಭೂಮಿಯ ಒಡೆಯ”

>79ಎ, 79ಬಿ ಮತ್ತು 79ಸಿ ಸೆಕ್ಷನ್ ಗಳ ಸೇರ್ಪಡೆ

>ಈ ತಿದ್ದುಪಡಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

> ಪ್ರಕರಣ: ಎಚ್.ಎಸ್. ಶ್ರೀನಿವಾಸ್ ರಾಘವಾಚಾರ್ Vs ಕರ್ನಾಟಕ ಸರಕಾರ

>1987ರ ಏ.23ರ ಸುಪ್ರೀಂ ತೀರ್ಪು: ಸಂವಿಧಾನದ ರಾಜನೀತಿಯ ನಿರ್ದೇಶಕ ತತ್ವಗಳ ಅಡಿ ಅನುಚ್ಛೇದ 39 (ಬಿ) ಮತ್ತು (ಸಿ) ಗೆ ಅನುಗುಣವಾಗಿದೆ ಮತ್ತು ಮೂಲ ಭೂ ಸುಧಾರಣಾ ಕಾಯ್ದೆ ಹಾಗೂ 1974ರ ತಿದ್ದುಪಡಿ ಎರಡನ್ನೂ 9ನೇ ಷೆಡ್ಯೂಲ್ ಸೇರಿಸಲಾಗಿದೆ.

>ಕಾಯ್ದೆ ಅಡಿಯಲ್ಲಿ ಸೇನೆಯಲ್ಲಿರುವವರು ಮಾತ್ರ ತಮ್ಮ ಜಮೀನನ್ನು ಗೇಣಿ ನೀಡಬಹುದಾಗಿತ್ತು. ಉಳಿದವರ ಜಮೀನನ್ನು ಸರ್ಕಾರವೇ ವಶಕ್ಕೆ ಪಡೆದು ಅದನ್ನು ಗಣೆದಾರರಾಗಿದ್ದವರಿಗೆ ವಾಪಸ್ ನೀಡಿ, ಅವರನ್ನೇ ಮಾಲೀಕರನ್ನಾಗಿ ಘೋಷಿಸಿತು.

>ಅರಸು ಅವರು ತಾಲೂಕಿಗೆ ಒಂದರಂತೆ ಭೂ ನ್ಯಾಯ ಮಂಡಳಿಯನ್ನು ಸ್ಥಾಪಿಸಿದರು. ತಾಲೂಕಿನ ತಹಶೀಲ್ದಾರ್ ಇದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿ ಹಿನ್ನಡೆ ಅನುಭವಿಸಿದವರು ಎಸಿ, ಡಿಸಿಗಳಿಗೆ ಮೇಲ್ಮನವಿ ಸಲ್ಲಿಸಬಹುದಿತ್ತು.

>ಎಲ್ಲಾ ರೀತಿಯ ಗೇಣಿ ರದ್ದು ಮಾಡಿತು.

>ಉಳುಮೆ ಮಾಡುತ್ತಿದ್ದ ಭೂಮಿ ಮೇಲೆ ಹಕ್ಕು ಹೊಂದಲು ರೈತರಿಗೆ ಅವಕಾಶ ನೀಡಿತು.

>ಗೇಣಿ ಮಾಡುತ್ತಿದ್ದ ಎಲ್ಲಾ ಭೂಮಿ ಸರ್ಕಾರದ ಪಾಲಾಯಿತು. ಪರಿಣಾಮ ಭೂಮಿ ಪಡೆಯಬಯಸಿದವರು & ಭೂ ಮಾಲೀಕರು ಪರಿಹಾರ ಕೋರಿ ನ್ಯಾಯ ಮಂಡಳಿಯಲ್ಲಿ ಅರ್ಜಿ ಹಾಕುವಂತಾಯಿತು. ಮಂಡಳಿಯ ತೀರ್ಮಾನವೇ ಅಂತಿಮವಾಗಿತ್ತು. ಆದರೆ ತೀರ್ಪನ್ನು ಹೈಕೋರ್ಟ್ ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿತ್ತು.

>1974ರಲ್ಲಿ ಭೂ ಸುಧಾರಣಾ(ತಿದ್ದುಪಡಿ) ಕಾಯಿದೆ:

>ಖುಷ್ಕಿ ಭೂಮಿಯಾದರೆ ಒಂದು ಕುಟುಂಬಕ್ಕೆ- 54 ಎಕರೆ.

>ನೀರಾವರಿ ಸೌಲಭ್ಯವಿದ್ದು, ಎರಡಕ್ಕಿಂತ ಹೆಚ್ಚು ಬೆಳೆ ಬೆಳೆಯುವಂತಿದ್ದರೆ- 10ರಿಂದ 18 ಎಕರೆ.

>ಒಂದು ಬೆಳೆ ತೆಗೆಯುವ ನೀರಾವರಿ ಭೂಮಿಯಾದರೆ-27 ಎಕರೆ.

>ಇದು ಇನಾಮ್ ಪದ್ಧತಿಯನ್ನೂ ರದ್ದುಗೊಳಿಸಿತು.

>1974ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಕೃಷಿ ಸಚಿವರಾಗಿದ್ದವರು-ಬಸವಲಿಂಗಪ್ಪ. ಇವರು ತಲೆ ಮೇಲೆ ಮಲ ಹೊರುವ ರೂಢಿಯನ್ನು ರದ್ದುಗೊಳಿಸಿದರು.

>ಧಾರವಾಡ ಜಿಲ್ಲೆಯ ನರಗುಂದ ರೈತ ಬಂಡಾಯ ನಡೆದ ವರ್ಷ-1980, ಜೂನ್.(ಇದು ಒಟ್ಟಾರೆ ರೈತರ ಪರ ನಡೆದ ಚಳುವಳಿ)

ಭೂ ನ್ಯಾಯ ಮಂಡಳಿ:

ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಕಲಂ 48(1)( ) ರ ಅನುಸಾರ ಕರ್ನಾಟಕ ಸರ್ಕಾರ ನಾಲ್ಕು ಜನ ಅಧಿಕಾರೇತರ ಸದಸ್ಯರನ್ನೊಳಗೊಂಡ ಭೂನ್ಯಾಯ ಮಂಡಳಿಗಳನ್ನು ತಾಲ್ಲೂಕಿಗೆ ಒಂದರಂತೆ ರಚಿಸಿತು. ಅದರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ವ್ಯಕ್ತಿ ಇರುತ್ತಿದ್ದರು. ರಾಜ್ಯದಲ್ಲಿ ಈಗಲೂ 176 ಭೂ ನ್ಯಾಯ ಮಂಡಳಿಗಳು ಅಸ್ತಿತ್ವದಲ್ಲಿವೆ. ಪ್ರಸ್ತುತ ಉಪ ವಿಭಾಗಾಧಿಕಾರಿಗಳ ಮಟ್ಟದ ಅಧಿಕಾರಿಗಳು ಭೂ ನ್ಯಾಯ ಮಂಡಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

>1974ರ ಕಲಂ 44ಕ್ಕೆ ತಿದ್ದುಪಡಿ ತಂದು ಎಲ್ಲರ ಬಳಿ ಇದ್ದ ಭೂಮಿಯನ್ನು ಸರ್ಕಾರ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿತ್ತು.

>ಕಲಂ 63ರ ಅಡಿಯಲ್ಲಿ ಜಾಮೀನು ಹೊಂದಲು ಮಿತಿಗಳನ್ನು ನಿಗದಿಪಡಿಸಲಾಯಿತು.

>ಕರ್ನಾಟಕ ಕಾಯ್ದೆ-1995ರ ಮೂಲಕ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೀನು ಸಾಕಣೆಗೆ ಒಳಪಟ್ಟ ಜಮೀನುಗಳನ್ನು ಗೇಣಿ ಹಕ್ಕು ನೀಡುವುದರಿಂದ ಹೊರಗಿಡಲಾಗಿತ್ತು.

>12000ಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಕೃಷಿ ಭೂಮಿಯನ್ನು ಖರೀದಿಸುವಂತಿಲ್ಲ.

>ಗೇಣಿದಾರಿಕೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಯಿತು.

>ಬಡ ಗೇಣಿದಾರರ ಸಹಾಯಕ್ಕಾಗಿ ಲೀಗಲ್ ಏಡ್ ಸೆಲ್ ಸ್ಥಾಪಿಸಲಾಯಿತು.

>ಭೂ ವ್ಯಾಜ್ಯ ಬಗೆಹರಿಸಲು ನ್ಯಾಯಾಧೀಕರಣಗಳನ್ನು ಸ್ಥಾಪಿಸಿತು.

>ಹೆಚ್ಚುವರಿ ಭೂಮಿಯು ನ್ಯಾಯಾಧೀಕರಣಗಳ ವಶವಾಯಿತು. ಇಂತಹ ಭೂಮಿಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.

>ಮನವಿ ಸಲ್ಲಿಸಿ ಭೂ ಒಡೆತನ ಪಡೆಯಲು ಗೇಣಿದಾರರಿಗೆ ಅವಕಾಶ ನೀಡಲಾಯಿತು.

>ಭೂಮಿ ಪಡೆಯಲು ಡಿಸಿಗೆ ಅರ್ಜಿ ಸಲ್ಲಿಸಬೇಕಿತ್ತು.

>ಹೆಚ್ಚುವರಿ ಭೂಮಿ ಪೈಕಿ 50%ರಷ್ಟನ್ನು ಎಸ್ಸಿ, ಎಸ್ಟಿಗಳಿಗೆ ನೀಡಬೇಕಿತ್ತು.

>ಕಾಫಿ, ಟೀ, ರಬ್ಬರ್, ಮೆಣಸು ಬೆಳೆಯುತ್ತಿದ್ದ ಪ್ಲಾಂಟೇಷನ್ ಬೆಳೆಗಾರರಿಗೆ ಭೂಮಿಯ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಯಿತು.

>ಜಮೀನ್ದಾರರಿಂದ ಭೂಮಿ ವಶಕ್ಕೆ ಪಡೆದು ಪರಿಹಾರ ನೀಡಲಾಯಿತು.

ಕರ್ನಾಟಕ ಭೂ ಸುಧಾರಣಾ(ತಿದ್ದುಪಡಿ) ಕಾಯಿದೆ-1995:

>ಘೋಷಣೆ: “ಸಾರ್ವಜನಿಕ ಹಿತಾಸಕ್ತಿಗಾಗಿ”

>1991ರವರೆಗೆ 12,000-50000 ಆದಾಯ ಗಳಿಸುತ್ತಿದ್ದವರು ಕೃಷಿ ಭೂಮಿ ಹೊಂದುವಂತಿರಲಿಲ್ಲ. 1995ರ ಈ ಕಾಯಿದೆಯು 79ಎ ಅಡಿ ಇದ್ದ ಆದಾಯ ಮಿತಿಯನ್ನು 50000ದಿಂದ 2 ಲಕ್ಷಕ್ಕೆ ಹೆಚ್ಚಿಸಿತು.

>1974ರ ಕಾಯಿದೆಯು ಸರ್ಕಾರಿ ಭೂಮಿಯನ್ನು ಗೇಣಿಗೆ ಕೊಡುವುದನ್ನು ರದ್ದು ಪಡಿಸಿತ್ತು. ಆದರೆ ಇದಕ್ಕೆ 1995ರಲ್ಲಿ ತಿದ್ದುಪಡಿ ತಂದು 20 ವರ್ಷಗಳವರೆಗೆ ಸರ್ಕಾರಿ ಭೂಮಿಯನ್ನೂ ಗೇಣಿ ಪಡೆಯಲು ಅವಕಾಶ ನೀಡಲಾಯಿತು. ಈ ಭೂಮಿಯ ಒಡೆತನ ಬಯಸುವ ಗೇಣಿದಾರರು ಸರ್ಕಾರದಿಂದ ಗೇಣಿ ಪಡೆದ ಭೂಮಿಯಿಂದ ಗಳಿಸುವ ಆದಾಯದ 15 ಪಟ್ಟು(ABC ಗೇಣಿದಾರರು) ಹಾಗೂ 20 ಪಟ್ಟು(DM ಗೇಣಿದಾರರು) ಆದಾಯವನ್ನು 20 ವರ್ಷಗಳ ಬಳಿಕ ಸರ್ಕಾರಕ್ಕೆ ಪಾವತಿಸಿ ಆ ಭೂಮಿಯ ಒಡೆಯರಾಗಬಹುದಿತ್ತು.

ಕರ್ನಾಟಕ ಭೂ ಸುಧಾರಣಾ ಕಾಯಿದೆ-2020:

>ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದ ಕಲಂ 79, 79ಬಿ, ಮತ್ತು 79ಸಿಯನ್ನು ಕರ್ನಾಟಕ ಭೂ ಸುಧಾರಣಾ(ತಿದ್ದುಪಡಿ) ಕಾಯ್ದೆ-2020ರಲ್ಲಿ ಕೈ ಬಿಡಲಾಗಿದೆ.

>ಸೆಕ್ಷನ್ 63 ಸಬ್ ಸೆಕ್ಷನ್ 2ಎ: 5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆ ಒಣ ಭೂಮಿ ಹೊಂದಬಹುದು.

>ಕುಟುಂಬದಲ್ಲಿ ಐವರಿದ್ದು, ಈ ಹಿಂದೆ 108 ಎಕರೆ(20 ಯೂನಿಟ್ ) ಹೊಂದಬಹುದಾಗಿದ್ದ ನೀರಾವರಿ ಜಮೀನನ್ನು 216 ಎಕರೆಗೆ ಹೆಚ್ಚಿಸಲಾಗಿದೆ.

>ರೈತರಲ್ಲದವರಿಗೆ ಕೃಷಿ ಭೂಮಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂಬ ನಿರ್ಬಂಧವಿದ್ದ ಕಲಂ 80 ಅನ್ನು ತೆಗೆದುಹಾಕಲಾಗಿದೆ. ಆದರೆ ನೀರಾವರಿಗೆ ಒಳಪಟ್ಟ ಮತ್ತು ಅಚ್ಚುಕಟ್ಟು ಪ್ರದೇಶವಾಗಿರುವ ಎ ದರ್ಜೆಯ ಭೂಮಿ ಮೇಲಿನ ನಿರ್ಬಂಧ ಹಾಗೆಯೇ ಮುಂದುವರಿದಿದೆ.

>ಈ ಹಿಂದೆ ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಹಂತದಲ್ಲಿ ಬಗೆಹರಿದಿರುವ ಪ್ರಕರಣಗಳಿಗೆ 2020ರ ಈ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ.

>25 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಮಾತ್ರ ಕೃಷಿ ಭೂಮಿ ಖರೀದಿಸಬಹುದು ಎಂಬ ಅವಕಾಶವಿದ್ದ 79A, ಕೃಷಿಯಿಂದ ಜೀವನ ಸಾಗಿಸುವವರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಬಹುದು ಎಂದಿದ್ದ 79B ಹಾಗೂ 79C ಅಡಿಯಲ್ಲಿ ತಹಶೀಲ್ದಾರ್, ಎಸಿ ಹಾಗೂ ಡೈಸಿಗಳು ತನಿಖೆ ಮಾಡುತ್ತಿದ್ದರು. ಆ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಕಂದಾಯ ಇಲಾಖೆಯೇ ತನಿಖಾ ಜವಾಬ್ದಾರಿಯನ್ನು ನಿರ್ವಹಿಸಲಿದೆ.

>ಸೆಕ್ಷನ್ 80 ಅನ್ನೂ ಡಿಲೀಟ್ ಮಾಡಲಾಗಿದ್ದು, ಕೃಷಿ ಭೂಮಿಯನ್ನು ಕೃಷಿಯೇತರರಿಗೆ ಉಡುಗೊರೆ, ವಿನಿಮಯ ಅಥವಾ ಮಾರಾಟ ರೂಪದಲ್ಲಿ ವರ್ಗಾಯಿಸುವಂತಿಲ್ಲ ಎಂದಿದ್ದ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಪರಿಣಾಮ 79Aಎ, 79B ಅಡಿಯಲ್ಲಿದ್ದ 13,814 ಪ್ರಕರಣಗಳನ್ನು ವಜಾ ಮಾಡಲಾಗಿದೆ.

>ಭೂಮಿ ತಂತ್ರಾಂಶ-ಪಹಣಿಯಂತಹ ಭೂ ದಾಖಲೆಗಳು

>ಮೋಜಿಣಿ-ಬೆಳೆ ಸಮೀಕ್ಷೆ

>ಕೊಳಗ ಕಾದಂಬರಿಯ ಕರ್ತೃ-ನಾ.ಡಿಸೋಜಾ.

>ಕೋಲಾರ ಭೂ ಆಕ್ರಮಣ ಚಳಿವಳಿ-1972

>ಮಲಪ್ರಭಾ ನಡಿಭಾಗದ ರೈತರ ಹೋರಾಟ-1980(ನವಲಗುಂದ, ನರಗುಂದ, ಸವದತ್ತಿಯಲ್ಲಿ 20 ರೈತರು ಹುತಾತ್ಮರಾದರು)

ಕರ್ನಾಟಕ ರಾಜ್ಯ ರೈತ ಸಂಘ:

>ಅಧ್ಯಕ್ಷರು-ಹೆಚ್.ಎಸ್.ರುದ್ರಪ್ಪ.

>ಸಂಚಾಲಕರು-ಎಂ.ಡಿ.ನಂಜುಂಡಸ್ವಾಮಿ.

>ಕಾರ್ಯದರ್ಶಿ-ಎನ್.ಡಿ.ಸುಂದರೇಶ್

>ಬಾಗೂರು-ನವಿಲೆ ಚಳುವಳಿ(ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ)

>ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯವಾಗಿದೆ ಎಂದವರು-ಸಚಿವ ಬಸವಲಿಂಗಪ್ಪ(ವಿರೋಧ ಎದುರಾಗಿದ್ದಕ್ಕೆ ರಾಜೀನಾಮೆ ನೀಡಿದರು)

Leave a Reply

Your email address will not be published. Required fields are marked *