ನಿರೂಪಕಿ ದಿವ್ಯಾ ವಸಂತ ಬಂಧನ

ಬೆಂಗಳೂರು: ಇಂದಿರಾನಗರದ ಸ್ಪಾ ಮಾಲೀಕರೊಬ್ಬರಿಂದ 15 ಲಕ್ಷ ರೂ. ಲಪಟಾಯಿಸಲು ಯತ್ನಿಸಿದ ಆರೋಪದಲ್ಲಿ ನಿರೂಪಕಿ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ದಿವ್ಯಾ ವಸಂತಾ ಅವರನ್ನು ಬಂಧಿಸಿದ್ದಾರೆ.

ನಿರೂಪಕಿ ಜತೆಗೆ ಸಂದಶ್ , ರಾಜಾನುಕುಂಟೆ ವೆಂಕಟೇಶ್ ಎಂಬುವವರನ್ನೂ ವಶಕ್ಕೆ ಪಡೆಯಲಾಗಿದೆ. ಅಸ್ಸಾಮ್ ಹುಡುಗಿಯನ್ನು ಬಳಸಿಕೊಂಡು ಮೋಸ ಮಾಡಲು ದಿವ್ಯಾ ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿ ಕರೆತಂದಿದ್ದಾರೆ.

ಈ ನಡುವೆ ದಿವ್ಯಾ ಹಾಗೂ ರಾಜಾನುಕುಂಟೆ ವೆಂಕಟೇಶ್ ಅವರು ಬಹಳ ಅನ್ಯೋನ್ಯತೆಯಿಂದ ಇರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಳೆದ ಆರು ತಿಂಗಳ ಹಿಂದಷ್ಟೇ ದಿವ್ಯಾ ಐಷಾರಾಮಿ ಕಾರೊಂದನ್ನು ಖರೀದಿಸಿದ್ದ ಬಗ್ಗೆ ತಿಳಿದೇ ಇದೆ.

Leave a Reply

Your email address will not be published. Required fields are marked *