ಬೆಂಗಳೂರು: ಪಿಜಿಗೆ ಸೇರುತ್ತಿದ್ದ ಯುವತಿಯರ ಫೋನ್ ನಂಬರ್ ಗಳನ್ನು ಸಂಗ್ರಹಿಸಿ, ಅವುಗಳನ್ನು ಅಂತರ್ಜಾಲದಲ್ಲಿ ಹಾಕಿ ಕಾಲ್ ಗರ್ಲ್ಸ್ ಎಂದು ಬಿಂಬಿಸುತ್ತಿದ್ದ ಪಿಜಿಯೊಂದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಜಿ ಮಾಲೀಕ, ಆರೋಪಿಯನ್ನು ಆನಂದ್ ಶರ್ಮಾ(೩೦) ಎಂದು ಹೇಳಲಾಗಿದ್ದು, ನಗರ ನಿವಾಸಿಯೇ ಆಗಿದ್ದಾನೆ. ಈತ ವಾಸದ ನೆಲೆ ಹುಡುಕಿಕೊಂಡು ಬರುತ್ತಿದ್ದ ಯುವತಿಯರಿಂದ ಕಾಂಟ್ಯಾಕ್ಟ್ಸ್ ನಂಬರ್ ಪಡೆದು, ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಸೆಕ್ಸ್ ವರ್ಕ್ ಬಗ್ಗೆ ವಿಚಾರಿಸಲು ಸಾಕಷ್ಟು ಜನ ಕರೆ ಮಾಡಿ ವಿಚಾರಿಸಿದಾಗ ಯುವತಿಯೊಬ್ಬಳು ಅನುಮಾನಗೊಂಡು ಅಂತರ್ಜಾಲ ಪರಿಶೀಲಿಸಿದ್ದಾಳೆ. ಆಗ ಪಿಜಿ ಮಾಲೀಕನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮಮಾಲೀಕನ ವಿರುದ್ಧ ಯುವತಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.