ಮಸಾಜ್ ಹೆಸರಿನಲ್ಲಿ ಮೋಸ: ಎಂಟು ಮಂದಿ ಬಂಧನ

ಮಡಿಕೇರಿ: ಕಾಳೇಘಾಟ್ ಹೋಟೆಲ್ & ಲಾಡ್ಜಿನ ಮ್ಯಾನೇಜರ್ ಎಂದು ಹೇಳಿಕೊಳ್ಳುತ್ತಿದ್ದ ಅಪರಿಚಿತ ವ್ಯಕ್ತಿ, ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಡೆದು ವಾಚಿಸಿರುವ ಘಟನೆ ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ.

ಕಳೆದ ಜೂ.29ರಂದು Locanto App ಮೂಲಕ ಮಂಜು ಎಂಬುವವರಿಗೆ ವಂಚಿಸಿದ್ದಾನೆ ಎನ್ನಲಾಗಿದೆ.

ಜಾಹೀರಾತು ಹಾಕಿದ್ದ ಆರೋಪಿ, ಹೆಂಗಸರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು. ಆದರೆ ಆನ್‌ಲೈನ್ ಮುಖೇನ ಮುಂಗಡ ಹಣ ಪಾವತಿಸಬೇಕು. ಆಗಲೇ ಹೆಂಗಸರ ಏರ್ಪಾಡು ಮಾಡಲಾಗುತ್ತದೆ ಎಂದಿದ್ದ. ಅಲ್ಲದೆ ದೂರುದಾರನಿಗೆ ಕೆಲ ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿದ್ದ. ಜತೆಗೆ ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಎಂದಿದ್ದ.

ಅದರಂತೆಯೇ ದೂರುದಾರರ ಗೂಗಲ್ ಪೇ ಮುಖಾಂತರ ರೂ. 1500/- ಹಣ ಕಳುಹಿಸಿದ್ದ. ಹಣಕ್ಕೆ ಮತ್ತೆ ಬೇಡಿಕೆ ಇಡಲಾಗಿ ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್‌ಶನ್‌ನಲ್ಲಿ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಂಜು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಕಾರು, 17 ಮೊಬೈಲ್, 1 ಟ್ಯಾಬ್, 1 ಲ್ಯಾಪ್ ಟಾಪ್ ಸೇರಿ 24 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *