ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟ ಎಂದೇ ಪ್ರಸಿದ್ಧಿ. ಇದೀಗ ಶಿವಣ್ಣನ ಅಭಿಮಾನಿಗಳು ಖುಷ್ ಆಗುವ ಸುದ್ದಿಯೊಂದು ಹೊರಬಿದ್ದಿದ್ದು, ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ.
ಅದೇನೆಂದರೆ, ಭೈರತಿ ರಣಗಲ್ ಸಿನಿಮಾದ ಆಡಿಯೋ ಹಕ್ಕುಗಳು ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಯ ಪಾಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಅಪ್‌ಡೇಟ್ ನೀಡುವುದಾಗಿ ಚಿತ್ರತಂಡ ಘೋಷಿಸಿದೆ. ಜುಲೈ 12ರ ಬೆಳಿಗ್ಗೆ 10:10ಕ್ಕೆ ಇದೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಆ ಅಪ್‌ಡೇಟ್ ಸಿಗಲಿದೆ ಎಂದು ಹೇಳಲಾಗಿದೆ.
ʼಮಫ್ತಿʼ ಖ್ಯಾತಿಯ ನರ್ತನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದನ್ನು ಮಫ್ತಿ ಸಿನಿಮಾದ ಸೀಕ್ವೆಲ್ ಎನ್ನಲಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ತಾರಾಗಣದಲ್ಲಿ ಮೂಡಿಬಂದಿದ್ದ ‘ಮಫ್ತಿ’ ಸಿನಿಮಾದಲ್ಲೂ ‘ಭೈರತಿ ರಣಗಲ್’ ಪಾತ್ರಕ್ಕೆ ಶಿವಣ್ಣ ಬಣ್ಣ ಹಚ್ಚಿದ್ದರು. ಈಗ ಇದೇ ಶೀರ್ಷಿಕೆಯಲ್ಲಿ ಸೀಕ್ವೆಲ್ ಸಿನಿಮಾ ಮೂಡಿಬಂದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.