ದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಂದು ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದೆ. ಹೌದು, ಈ ಕುರಿತು ಹಣಕಾಸು ಇಲಾಖೆಯು ಔಪಚಾರಿಕ ಮಾಹಿತಿ ನೀಡಿದ್ದು, ಜುಲೈ ಒಳಗೊಂದು ಸೆಪ್ಟೆಂಬರ್ ಗೆ ಅಂತ್ಯವಾಗುವ ಈ ವರ್ಷದ ಹಣಕಾಸು ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ನೌಕರರ ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿರುವ ಠೇವಣಿಗೆ 7.1ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ಘೋಷಿಸಿದೆ.
ಇದೇ ವೇಳೆ, ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.8.2ರಷ್ಟು ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಬಡ್ಡಿದರವನ್ನು ಈ ಹಿಂದೆ ನಿಗದಿಪಡಿಸಿದ್ದ ಶೇ.7.7ರಷ್ಟೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ಈ ಹೊಸ ಆದೇಶದ ಪ್ರಕಾರ, ಸಾಮಾನ್ಯ ಭವಿಷ್ಯ ನಿಧಿ(ಕೇಂದ್ರ ಸೇವೆಗಳು), ಕೊಡುಗೆ ಭವಿಷ್ಯ ನಿಧಿ(ಭಾರತ), ಅಖಿಲ ಭಾರತ ಸೇವೆಗಳ ಭವಿಷ್ಯ ನಿಧಿ, ರಾಜ್ಯ ರೈಲ್ವೆ ಭವಿಷ್ಯ ನಿಧಿ, ಸಾಮಾನ್ಯ ಭವಿಷ್ಯ ನಿಧಿ(ರಕ್ಷಣಾ ಸೇವೆ), ಭಾರತೀಯ ಶಸ್ತ್ರಾಸ್ತ್ರಯ ಇಲಾಖೆ ಭವಿಷ್ಯ ನಿಧಿಗಳೂ ಒಳಗೊಳ್ಳಲಿವೆ ಎಂದು ಸ್ಪಷ್ಟಪಡಿಸಿದೆ.