ನವದೆಹಲಿ: ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟ್ವೀಟ್ ಮಾಡುವ ಮುಖೇನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ವೇಳೆ, ನಮ್ಮ ಚಾಂಪಿಯನ್ಸ್ ಭೇಟಿ ಮಾಡಿದ್ದು ಅತ್ಯಂತ ಸಂತೋಷಕರವಾಗಿತ್ತು. ಬೆಳಗ್ಗೆ 7 ಗಂಟೆಗೆ ನಮ್ಮ ಎಲ್ಲಾ ಆಟಗಾರರನ್ನು ಲೋಕ ಕಲ್ಯಾಣ ಮಾರ್ಗದ ನಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ್ದೆ. ಪಂದ್ಯದ ವೇಳೆ ಆದ ಎಲ್ಲಾ ರೀತಿಯ ಅನುಭವಗಳನ್ನೂ ನಮ್ಮ ಆಟಗಾರರು ನನ್ನೊಂದಿಗೆ ಹಂಚಿಕೊಂಡರು. ಇದು ಅವಿಸ್ಮರಣೀಯ ಎಂದು ಉಲ್ಲೇಖಿಸಿದ್ದಾರೆ.
ಬರೋಬ್ಬರಿ 17 ವರ್ಷದ ಬಳಿಕ ಟೀಂ ಇಂಡಿಯಾ ಟಿ೨೦ ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. ಬಳಿಕ ಇಂದಷ್ಟೇ ದೆಹಲಿಗೆ ಆಗಮಿಸಿದ್ದ ಆಟಗಾರರು ನೇರವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದರು.